ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಸ್ ಪೋರ್ಟಿಗೆ ಕೊಟ್ಟಿದ್ದ ದಾಖಲೆ ಪೇದೆಯಿಂದ ದುರ್ಬಳಕೆ

By Srinath
|
Google Oneindia Kannada News

uppinangady-police-fraud-cop-misuses-documents-of-passport-applicant
ಪುತ್ತೂರು, ಫೆ. 4: ವ್ಯಕ್ತಿಯೊಬ್ಬರು ತಮ್ಮ ಪಾಸ್ ಪೋರ್ಟಿಗೆಂದು ಕೊಟ್ಟಿದ್ದ ದಾಖಲೆಗಳನ್ನು ಪೊಲೀಸ್ ಪೇದೆ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿಯ ಶಬ್ಬೀರ್ ನೊಂದ ವ್ಯಕ್ತಿ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೇದೆ ಲಕ್ಷ್ಮೀಶ ಆರೋಪಿ ಪೊಲೀಸ್.

ಶಬ್ಬೀರ್ ಉಪ್ಪಿನಂಗಡಿಯಲ್ಲಿದ್ದ ಮೊಬೈಲ್ ಅಂಗಡಿಗೆ ಹೋದಾಗ ಪೇದೆಯ ಕರಾಮತ್ತು ಬೆಳಕಿಗೆ ಬಂದಿದೆ. ಅಲ್ಲೇನಾಗಿತ್ತೆಂದರೆ ಶಬ್ಬೀರ್ ಅವರ ಫೋಟೋ ಮತ್ತು ರೇಶನ್ ಕಾರ್ಡ್ ಅನ್ನು ನೀಡಿ ಬೇರೊಬ್ಬ ವ್ಯಕ್ತಿ ಮೊಬೈಲ್ ಸಿಮ್ ಕಾರ್ಡ್ ಪಡೆದಿರುವ ಅಚಾನಕ್ಕಾಗಿ ಅವರ ಗಣ್ಣಿಗೆ ಬಿದ್ದಿದೆ.

ಅಂಗಡಿಯವನನ್ನು ವಿಚಾರಿಸಲಾಗಿ ಪೇದೆ ಲಕ್ಷ್ಮೀಶ ದಾಖಲೆಗಳನ್ನು ನೀಡಿ, ಸಿಮ್ ಪಡೆದಿರುವುದು ಪತ್ತೆಯಾಗಿದೆ. ಆದರೆ ಶಬ್ಬೀರ್ ಅವರು ಮಂಗಳೂರಿನಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿ, ಅದರ ಜತೆಗೆ ತಮ್ಮ ಫೋಟೋ ಮತ್ತು ರೇಶನ್ ಕಾರ್ಡ್ ದಾಖಲೆಗಳನ್ನು ಲಗತ್ತಿಸಿದ್ದರು. ಅದು ಶಬ್ಬೀರ್ ವಾಸಿಸುವ ಉಪ್ಪಿನಂಗಡಿ ಪೊಲೀಸ್ ಠಾಣೆಗೆ verificationಗೆಂದು ಬಂದಿದೆ.

ಆದರೆ ಪೇದೆ ಲಕ್ಷ್ಮೀಶ ಕ್ರಮಿನಲ್ ಬುದ್ಧಿ ಉಪಯೋಗಿಸಿ, ಶಬ್ಬೀರ್ ಫೋಟೋ ಮತ್ತು ರೇಶನ್ ಕಾರ್ಡ್ ದಾಖಲೆಗಳನ್ನು ಬಳಸಿ, ಸಿಮ್ ಕಾರ್ಡ್ ಪಡೆದಿದ್ದಾನೆ.

ಇದರಿಂದ ಅಸಮಾಧಾನಗೊಂಡ ಶಬ್ಬೀರ್ ಅವರು ಸೀದಾ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅವರನ್ನು ಫೆಬ್ರವರಿ 1 ರಂದು ಭೇಟಿ, ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿ, ಪೇದೆ ಲಕ್ಷ್ಮೀಶನ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಐಜಿಪಿ ಪ್ರತಾಪ್ ರೆಡ್ಡಿ ಭರವಸೆ ನೀಡಿದ್ದಾರೆ.

English summary
Uppinangady police fraud cop Lakshmisha misuses documents submitted by passport applicant Shabeer. Hence Shabeer reported this to the IGP Western Range Pratap Reddy and filed a complaint. The IGP has assured him to look into the complaint and take necessary action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X