ವಿವಿ ವೆಬ್ ಸೈಟ್ ಹ್ಯಾಕ್‌ ಪ್ರಕರಣ : ತನಿಖೆಗೆ ಆದೇಶ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 4 : ಜನವರಿ 23ರಂದು ಪ್ರಕಟಗೊಳ್ಳಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಫಲಿತಾಂಶ ಅದಕ್ಕಿಂತ ಮುಂಚಿತವಾಗಿ ಖಾಸಗಿ ವೆಬ್ ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಮಂಗಳೂರು ವಿಶ್ವ ವಿದ್ಯಾನಿಲಯದ ವೆಬ್ ಸೈಟ್ ಹೆಸರಿನಲ್ಲಿ ಖಾಸಗಿ ವೆಬ್ ಸೈಟ್ ಫಲಿತಾಂಶವನ್ನು ಪ್ರಕಟಿಸಿತ್ತು. ಇದರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಕೆ. ಭೈರಪ್ಪ ತಿಳಿಸಿದ್ದಾರೆ.

Unofficial announcement of Mangalore University degree results

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವ ಮುಂಚೆಯೇ ಪದವಿ ಫಲಿತಾಂಶ ಬಹಿರಂಗಗೊಂಡಿತ್ತು. ಈ ಬಗ್ಗೆ ವಿಶ್ವ ವಿದ್ಯಾನಿಲಯದ ಗಮನಕ್ಕೆ ಬಂದ ಕೂಡಲೇ ವೆಬ್ ಸೈಟನ್ನು ಬ್ಲಾಕ್ ಮಾಡಲಾಗಿತ್ತು.

ವಿಶ್ವವಿದ್ಯಾನಿಲಯದ ಮೂಲಕ ಅಧಿಕೃತವಾಗಿ ಫಲಿತಾಂಶ ಹೇಗೆ ಪ್ರಕಟಗೊಂಡಿದೆ ಎನ್ನುವ ಬಗ್ಗೆ ತನಿಖೆಗೆ ನಡೆಸಲು ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪಿ.ಎ.ಖಾನ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangalore University degree results were announced on website even before it is declared on official website of the university. An inquiry has bee n ordered by vice-chancellor K Bhyrappa.
Please Wait while comments are loading...