ಸದಾನಂದ ಗೌಡರಿಂದ ರಾಷ್ಟ್ರಪತಿಗಳಿಗೆ ಕಂಬಳ ಮಸೂದೆ ಸಲ್ಲಿಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ದೆಹಲಿ/ಮಂಗಳೂರು, ಎಪ್ರಿಲ್ 18 : ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಅನುಷ್ಠಾನ ಇಲಾಖೆ ಸಚಿವ ಡಿ ವಿ ಸದಾನಂದ ಗೌಡ ಅವರು ಮಂಗಳವಾರ ಕಂಬಳ ಮಸೂದೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲಿಸಿದ್ದಾರೆ.

ಕಂಬಳ ಕ್ರೀಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಂಡಿಸಿರುವ ಮಸೂದೆಯನ್ನು ಕೆಲವೊಂದು ನ್ಯೂನ್ಯತೆಗಳನ್ನು ಕೇಂದ್ರ ಗೃಹ ಇಲಾಖೆ ಸರಿಪಡಿಸಿದ್ದು ಇದಕ್ಕೆ ಅಂಕಿತ ಹಾಕುವ ನಿಟ್ಟಿನಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು.[ಮಸೂದೆ ಪಾಸ್.. ಕಂಬಳ ಉಳಿಸಿ ಚಳುವಳಿಗಾರರಿಗೆ ಜೈ]

ಈ ಕುರಿತು ಮಾತನಾಡಿದ ಡಿವಿಎಸ್, 'ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾದ ಕಂಬಳ ಕುರಿತ ಮಸೂದೆಯಲ್ಲಿ ನಿಯಮ ಪಾಲನೆ ಯಾರು ಮಾಡುತ್ತಾರೆಂದು ಉಲ್ಲೇಖಿಸಿಲ್ಲ.

Union Minister D V Sadananda Gowda sent Kambala Bill to President on April 18

ಆದರೆ, ಜಲ್ಲಿಕಟ್ಟುವಿನಲ್ಲಿ ರಾಜ್ಯವೇ ನಿಯಮ ಪಾಲನೆ ಮಾಡುವ ಬಗ್ಗೆ ಲಿಖಿತವಾಗಿ ಉಲ್ಲೇಖಿಸಿರುವುದರಿಂದ ಜಲ್ಲಿಕಟ್ಟಿಗೆ ಜಯ ಸಿಕ್ಕಿದೆ. ಹೀಗಾಗಿ ಕಂಬಳಕ್ಕೆ ಕೂಡಾ ರಾಷ್ಟ್ರಪತಿ ಶೀಘ್ರವೇ ಸಹಿ ಹಾಕುವ ವಿಶ್ವಾಸವಿದೆ' ಎಂದರು.

ಆತ್ಮಶ್ರೀಗೆ ವೀರವನಿತೆ ಒನಕೆ ಓಬವ್ವ ಪ್ರಶಸ್ತಿ:

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಆತ್ಮಶ್ರೀ ಅವರು 'ವೀರವನಿತೆ ಒನಕೆ ಓಬವ್ವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಮೂಡಬಿರೆಯ ಆಳ್ವಾಸ್ ಪ್ರತಿಷ್ಠಾನದ ವಿದ್ಯಾರ್ಥಿಯಾದ ಆತ್ಮಶ್ರೀ ಕುಸ್ತಿ ಸ್ಪರ್ಧೆಯಲ್ಲಿ ಎತ್ತಿದ ಕೈ. ಈಕೆ ಚಿತ್ರದುರ್ಗದಲ್ಲಿ ನಡೆದ ಜಂಗಿ ಕುಸ್ತಿಯಲ್ಲಿ ಕೊಡಗು ಹಾಗೂ ಮಂಡ್ಯ ಜಿಲ್ಲೆಯ ಕುಸ್ತಿ ಪಟುಗಳನ್ನು ಮಣಿಸುವುದರ ಮೂಲಕ 'ವೀರ ವನಿತೆ ಓಬವ್ವ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಆತ್ಮಶ್ರೀಯವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister of Statistics and Programme Implementation D V Sadananda Gowda will sent Kambala Bill to President Pranab Mukherjee on April 18, for his assent.
Please Wait while comments are loading...