ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಲ್ಲೇ ಮೊಬೈಲ್ ಬಳಸಿದ ಆರೋಪಿಗಳ ಮರುಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 17 : ನಗರದ ಜೈಲ್‌ನೊಳಗೆ ಮೊಬೈಲ್ ಬಳಕೆ ಮಾಡಿದ ಆರೋಪದ ಮೇರೆಗೆ ಕುದ್ರೋಳಿಯ ರಹೀಮ್(40) ಹಾಗೂ ಪಂಜಿಮೊಗರಿನ ಪ್ರವೀಣ್ ಅನಿಲ್ ಮೋಂತೆರೋ (27) ರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಬ್ಬರೂ ಜೈಲ್‌ನಲ್ಲಿ ಮೊಬೈಲ್ ಬಳಕೆ ಮಾಡಿದ್ದರು.

ಉಳ್ಳಾಲದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ರಹೀಮ್, ಸುಲಿಗೆ ಪ್ರಕರಣದಲ್ಲಿ ಅನಿಲ್ ಮೋಂತೆರೋ ಜೈಲು ಪಾಲಾಗಿದ್ದರು. ಜೈಲಿನಲ್ಲಿ ಆರೋಪಿಗಳು ಭದ್ರತಾ ಸಿಬ್ಬಂದಿಗಳಿಗೆ ಗೊತ್ತಾಗದಂತೆ ಮೊಬೈಲ್ ಬಳಸಿದ್ದರು.

ಪೊಲೀಸರು ಜೈಲಿನೊಳಗೆ ತಪಾಸಣೆ ನಡೆಸಿದ ಸಂದರ್ಭ ಸಿಮ್ ಪತ್ತೆಯಾಗಿದ್ದವು. ಆದರೆ ಸರಿಯಾದ ಆಧಾರವಿಲ್ಲದೆ ಈ ಸಿಮ್ ಯಾರದೆಂದು ಪತ್ತೆಯಾಗಿರಲಿಲ್ಲ. ಕೆಲವು ಸಮಯದ ಬಳಿಕ ಆರೋಪಿಗಳು ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು.

Undertrial criminals rearrested for making use of mobile in jail

ಪತ್ತೆಯಾದ ಸಿಮ್ ಗಳನ್ನು ಪೊಲೀಸರು ಸೈಬರ್ ಕ್ರೈಂ ಗೆ ಕಳುಹಿಸಿದ್ದರು. ಸಿಮ್ ನಿಂದ ಯಾರಿಗೆಲ್ಲಾ ಕರೆ ಹೋಗಿದೆ ಎನ್ನುವುದನ್ನು ಪರಿಶೀಲನೆ ನಡೆಸಿದಾಗ, ಈ ಇಬ್ಬರು ಆರೋಪಿಗಳು ಜೈಲ್‌ನೊಳಗಿದ್ದುಕೊಂಡೇ ಈ ಸಿಮ್ ಉಪಯೋಗಿಸಿರುವುದು ದೃಢಪಟ್ಟಿದೆ.

ಈ ಆಧಾರದ ಮೇಲೆ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಗಾಂಜಾ ಮಾರಾಟ ಪ್ರಕರಣದ ಆರೋಪಿ ರಹೀಮ್ ನ್ಯಾಯಾಂಗ ಬಂಧನಕ್ಕೊಳಗಾಗಿದ್ದು, ಸುಲಿಗೆ ಪ್ರಕರಣದ ಆರೋಪಿ ಮೋಂತೆರೋ ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Two undertrials, who were on bail, have been rearrested by Mangaluru police for making use of mobile while they were in jail. Both had clandestinely used mobile without being noticed by jail authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X