ದುಷ್ಕರ್ಮಿಗಳಿಂದ ಉಳ್ಳಾಲ ನಗರಸಭಾ ಸದಸ್ಯನ ಕಾರು ಜಖಂ

Posted By:
Subscribe to Oneindia Kannada
Ullala councillor car damaged by anti social elements
ಮಂಗಳೂರು, ಜನವರಿ 12: ದುಷ್ಕರ್ಮಿಗಳ ತಂಡವೊಂದು ಇಲ್ಲಿನ ಉಳ್ಳಾಲ ಮೇಲಂಗಡಿಯಲ್ಲಿ ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ್ ಸ್ವಿಫ್ಟ್ ಕಾರನ್ನು ಜಖಂಗೊಳಿಸಿದ್ದಾರೆ.

ಮನೆಯೆದರು ನಿಲ್ಲಿಸಲಾಗಿದ್ದ ಕಾರಿನ ಮೇಲೆ ತಮ್ಮ ಪರಾಕ್ರಮ ತೋರಿರುವ ಕಿಡಿಗೇಡಿಗಳು, ಕಾರಿನ ಗಾಜು, ಕನ್ನಡಿಗಳನ್ನು ಒಡೆದು ಹಾಕಿರುವುದಲ್ಲದೆ, ಇಡೀ ಕಾರಿಗೆ ಹೆಚ್ಚಿನ ಪ್ರಮಾಣದ ಹಾನಿಯನ್ನುಂಟು ಮಾಡಿದ್ದಾರೆ.

Ullala councillor car damaged by anti social elements

ಸ್ಥಳ್ಕಕ್ಕೆ ಭೇಟಿ ನೀಡಿರುವ ಪೊಲೀಸರು, ಗಾಂಜಾ ಮಾಫಿಯಾ, ಹಫ್ತಾ ವಸೂಲಿ ಮಾಫಿಯಾಗಳಿಂದ ಈ ಕೃತ್ಯ ನಡೆದಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಉಳ್ಳಾಲದಾದ್ಯಂತ ಹೆಚ್ಚುತ್ತಿರುವ ಗಾಂಜಾ ಮಾಫಿಯಾ ವಿರುದ್ಧ ಧ್ವನಿ ಎತ್ತಿದ್ದ ಫಾರೂಕ್ ಅವರನ್ನು ಬೆದರಿಸಲು ಈ ರೀತಿಯ ತಂತ್ರಗಾರಿಕೆಯನ್ನು ದುಷ್ಕರ್ಮಿಗಳು ಅನುಸರಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ullala councillor Farooq's car has been damaged by unidentified men on Thursday.
Please Wait while comments are loading...