ಮಂಗಳೂರು : ಕುಖ್ಯಾತ ಗ್ಯಾಂಗ್ ನ ಇಬ್ಬರು ರೌಡಿಗಳ ಬಂಧನ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 23 : ಮಂಗಳೂರಿನ ನಟೋರಿಯಸ್ ಗ್ಯಾಂಗ್ ಟಾರ್ಗೇಟ್ ಗ್ರೂಪ್ ನ ಇಬ್ಬರನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಮಂಗಳೂರು ಪೊಲೀಸರು ನಡೆಸಿದ 2 ಪ್ರತ್ಯೇಕ ಕಾರ್ಯಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ.

ಮಂಗಳೂರು ಹೊರವಲಯದ ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿಯಾದ ಸುಮೋ ಇಮ್ರಾನ್ ಅಲಿಯಾಸ್ ಇಮ್ರಾನ್ ಮತ್ತು ಇಲ್ಯಾಸ್ ಎಂಬವವರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

Ullal Target Group Aide Arrested

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ , ಇಮ್ರಾನ್ ಮುಂಬಾಯಿಯ ದಾದರ್ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ವುಡ್ ಲ್ಯಾಂಡ್ ಗೆಸ್ಟ್ ಹೌಸ್ ಲಾಡ್ಜ್ ನಲ್ಲಿ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಮುಂಬಯಿ ನಗರಕ್ಕೆ ತೆರಳಿದ್ದ ರೌಡಿ ನಿಗ್ರಹದಳದ ಸಿಬ್ಬಂದಿ ಗೆಸ್ಟ್ ಹೌಸ್ ಮೇಲೆ ದಾಳಿ ಮಾಡಿ ಸುರ್ಮೋ ಇಮ್ರಾನ್ ನನ್ನು ಬಂಧಿಸಿದ್ದಾರೆ. ಈತನ ವಿರುದ್ದ ಬಜ್ಪೆ ,ಉಳ್ಳಾಲ ಮತ್ತು ಯಲ್ಲಾಪುರ ಪೋಲಿಸ್ ಠಾಣೆಗಳಲ್ಲಿ ಒಟ್ಟು 3 ವಾರಂಟ್ ಗಳಿದ್ದು ನ್ಯಾಯಲಯಾಕ್ಕೆ ಹಾಜರಾಗದೇ ಇದ್ದು ತಲೆ ಮರೆಸಿಕೊಂಡಿರುವುದಾಗಿದೆ. ಈತನ ವಿರುದ್ದ ನಗರದ ಉಳ್ಳಾಲ, ಬಜ್ಪೆ, ಮತ್ತು ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ,ದರೋಡೆ,ದರೋಡೆಗೆ ಯತ್ನ ಮೊದಲಾದ ಸುಮಾರು 9 ಪ್ರಕರಣಗಳು ಧಾಖಲಾಗಿದೆ.

ಈ ನಡುವೆ ಈ ನಟೋರಿಯಸ್ ಟಾರ್ಗೆಟ್ ಗ್ಯಾಂಗ್ ನ ಇನ್ನೊಬ್ಬ ಸದಸ್ಯ ನಗರದ ಜಪ್ಪು ಕುಡುಪಾಡಿ ಮಸೀದಿ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ರೌಡಿ ನಿಗ್ರಹ ದಳದ ಪೊಲೀಸರಿಗೆ ದೊರೆತಿತ್ತು . ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಇಲ್ಯಾಸ್ ಎಂಬುವರನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Anti-rowdy Squad police arrested the aide of Ullal Target Gang at the Woodland Guest House near Dadar Railway Station Mumbai and jeppu in Mangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ