​ಮಂಗಳೂರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು ಡಿಸೆಂಬರ್ 10: ನಗರದ ವಿದ್ಯಾನಗರ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ನಿನ್ನೆ(ಶುಕ್ರವಾರ) ಬಂಧಿಸಿದ್ದಾರೆ.

ಬಶೀರ್, ಷರೀಪ್ ಬಂಧಿತ ಆರೋಪಿಗಳು. 320 ಗ್ರಾಂ ಗಾಂಜಾವನ್ನು ವಿದ್ಯಾನಗರ ಕ್ರಾಸ್ ಬಳಿ ಮಾರಾಟ ಮಾಡಲು ತಂದಿದ್ದರು. ಈ ವೇಳೆ ಖಚಿತ ಮಾಹಿತಿ ಆದರಿಸಿ ಪೊಲೀಸರು ದಾಳಿ ಮಾಡಿದ್ದು, ಗಾಂಜಾವನ್ನು ವಶಪಡಿಸಿಕೊಂಡರು. ಅಲ್ಲದೆ ಅವರು ಎಲ್ಲಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಕಾವೂರು ಪೊಲೀಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.[ಮಾದಕ ವಸ್ತು ಜಾಲ ಪತ್ತೆ: 57 ಕೆಜಿ ಗಾಂಜಾ ವಶ]​

Two Separate crime in mangaluru

ಅಂತರಾಜ್ಯ ಕಳ್ಳನ ಬಂಧನ:

ಅಂತಾರಾಜ್ಯ ಚೋರನೊಬ್ಬನನ್ನು ಉರ್ವ ಪೊಲೀಸರು ಬಂಧಿಸಿದ್ದು ಅವರ ಬಳಿ ಇದ್ದ ಚಿನ್ನಾಭರಣ, ನಗದನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಹೊಸ ನೋಟುಗಳು ಇವೆ.[ಪುತ್ತೂರಿನಲ್ಲಿ ಸಿಕ್ಕಿದ್ದು ದಾಖಲೆ ಇಲ್ಲದ 19 ಲಕ್ಷ, ಮೂವರು ಆರೋಪಿಗಳು]

Two Separate crime in mangaluru

ದಾವಣಗೆರೆಯ ಮಂಜುನಾಥ ಬಂಧಿತ ಆರೋಪಿ. ಮಂಜುನಾಥ್ ಮಂಗಳೂರು ಉರ್ವ ಮತ್ತು ತಮಿಳುನಾಡು ಚೆನ್ನೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಗೈದಿದ್ದ ಎನ್ನಲಾಗಿದ್ದು, 4 ಬಂಗಾರದ ಬಳೆ, 2 ಚಿನ್ನದ ನಾಣ್ಯ, 2 ಬೆಳ್ಳಿ ಉಂಗುರ, ರು 66 ಸಾವಿರ ನಗದು ವಶ‌ಪಡಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two Separate story of crime in mangaluru. One mangaluru police found 320 gram in Marijuana sale accuse arrested. Another one inter-state thief arrest in with gold jewelry and money.
Please Wait while comments are loading...