ಶನಿವಾರದಿಂದ ಮಂಗಳೂರಲ್ಲಿ 'ಜೇನು ಝೇಂಕಾರ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಮಾರ್ಚ್,11: ಜೇನು ಸಾಕಾಣಿಕೆ ಮತ್ತು ಜೇನು ಆಧಾರಿತ ಚಟುವಟಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮಾ.12 ಮತ್ತು 13ರಂದು 'ಜೇನು ಝೇಂಕಾರ' ಮೇಳ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ತೋಟಗಾರಿಕಾ ಇಲಾಖೆ ಹಾಗೂ ಖಾದಿ ಗ್ರಾಮೋದ್ಯೋಗ ಇಲಾಖೆ ವತಿಯಿಂದ ಈ ಮೇಳ ಹಮ್ಮಿಕೊಳ್ಳಲಾಗಿದ್ದು, ಜೇನಿನ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ಜೇನಿನ ಔಷಧೀಯ ಗುಣಗಳ ಬಗ್ಗೆ ಜೇನು ಕೃಷಿಕರು ಮಾಹಿತಿ ನೀಡಲಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ಎಚ್.ಆರ್ ತಿಳಿಸಿದರು.[ಲಾಲ್ಬಾಗಿನಲ್ಲಿ ಮೈವೆತ್ತ ದೇಶ-ವಿದೇಶಗಳ ಹಣ್ಣಿನ ಸಾಮ್ರಾಜ್ಯ ನೋಡಿ]

Mangaluru

ಜೇನಿನ ಪ್ರಗತಿಪರ ಸಾಕಣೆದಾರರಿಂದ ಮಾ.13 ರಂದು ಬೆಳಗ್ಗೆ 10 ರಿಂದ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ನಡೆಸುವ ಬಗ್ಗೆ ತರಬೇತಿ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಾವಯವ ಕೃಷಿ ಕುರಿತ ತರಬೇತಿ ಕಾರ್ಯಕ್ರಮವು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸಮಾರಂಭ ಉದ್ಘಾಟಿಸಲಿದ್ದಾರೆ.[ಬಣ್ಣನ ಬಣ್ಣದ ಮೀನು, ಬಗೆ ಬಗೆಯ ಖಾದ್ಯ!]

ಜೇನು ಮೇಳದಲ್ಲಿ ನಿಮಗೆ ಯಾವ ಮಾಹಿತಿ ದೊರೆಯಲಿದೆ?

ಜೇನು ಸಾಕಣೆಗೆ ಸಂಬಂಧಿಸಿದ ಪರಿಕರಗಳ ಪ್ರದರ್ಶನ, ಜೇನಿನ ವಿವಿಧ ಪ್ರಭೇದ ಪ್ರದರ್ಶನ, ಜೀವಂತ ಜೇನು ಕುಟುಂಬ ಪ್ರದರ್ಶನ, ಪುತ್ತೂರಿನ ಜೇನು ಬೆಳೆಗಾರರ ಸಂಘದವರಿಂದ ಜೇನು ಪ್ರದರ್ಶನ ಮತ್ತು ಮಾರಾಟ, ಆಯುಷ್ ಇಲಾಖೆಯಿಂದ ಜೇನಿನ ಉಪಯೋಗ ಮತ್ತು ಔಷಧೀಯ ಗುಣಗಳ ಬಗ್ಗೆ ಮಾಹಿತಿ, ಜೇನಿನ ವಿವಿಧ ಪೇಯಗಳ ತಯಾರಿಕೆ ಬಗ್ಗೆ ಎಸ್ ಡಿಎಂ ನ್ಯಾಚುರೋಪತಿ ವಿದ್ಯಾರ್ಥಿಗಳಿಂದ ಮಾಹಿತಿ, ವಿವಿಧ ಆಯುರ್ವೇದ ಸಂಘಗಳಿಂದ ಜೇನು ಬಳಕೆ ಮಾಡಿ ತಯಾರಿದ ಔಷಧ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.[ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

ಸಾವಯವ ಮೇಳ:

ಸಾವಯವ ಕೃಷಿಕ ಗ್ರಾಹಕರ ಮೇಳದ ವತಿಯಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಂದ ಸಾವಯವ ಉತ್ಪನ್ನ ಮತ್ತು ಮೌಲ್ಯವರ್ಧಿತ ಉತ್ಪನ್ನ ಪ್ರದರ್ಶನ ಹಾಗೂ ಮಾರಾಟ, ಸಾವಯವ ಕೃಷಿಗೆ ಬಳಸುವ ಕೃಷಿ ಪರಿಕರಗಳ ಪ್ರದರ್ಶನ, ವಿವಿಧ ತರಕಾರಿ ಬೀಜಗಳ ಮಾರಾಟ ಇರುತ್ತದೆ ಎಂದು ಜಿಪಂ ಸಿಇಓಪಿ. ಐ ಶ್ರೀವಿದ್ಯಾ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dakshina kannada horticulture department welcomes you to two days 'Bee Mela' (Jeenu zenkar) at Kadri Park in Mangaluru on March 12 and 13th
Please Wait while comments are loading...