ಕಾಸರಗೋಡು: ನಾಪತ್ತೆಯಾಗಿದ್ದ ಸಹೋದರರಿಬ್ಬರ ಶವ ಬಾವಿಯಲ್ಲಿ ಪತ್ತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಅಕ್ಟೋಬರ್ 07 : ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನ ಸತೀಶ್ (40) ಮತ್ತು ಸಹೋದರ ಸಜಿತ್ (36) ಮೃತದೇಹಗಳು ಗುರುವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿವೆ.

ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ಮೂಲದ ಸತೀಶ್ ಬಸ್ ಚಾಲನೆ ಮಾಡುತ್ತಿದ್ದು. ಸಜಿತ್ ಲಾರಿ ಚಾಲಕನಾಗಿದ್ದ. ಇವರಿಬ್ಬರು ಕಳೆದು ಒಂದು ದಿನದಿಂದ ಕಾಣೆಯಾಗಿದ್ದರು. ಮನೆಯವರ ಹುಡುಕಾಟದಲ್ಲಿ ದಾರಿ ಮಧ್ಯೆ ಇರುವ ಬಾವಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು. ಇವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ.

kasaragod

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅವರು ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬಾವಿ ಸಮೀಪ ವಾಚ್ , ಚಪ್ಪಲಿ, ಲುಂಗಿ ಪತ್ತೆಯಾಗಿದ್ದು. ಇವರ ಸಾವು ಆಕಸ್ಮಿಕವೋ ಅಥವಾ ಇನ್ಯಾವುದೇ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dead body of two brothers was found in a well in Chimeni on Thursday, October 6. The deceased have been identified as Satish (40) and his brother Sajith (36) both from Chimeni Cheluvakkod in Chervathur, kasaragod.
Please Wait while comments are loading...