ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಮತ್ತೆ ರಕ್ತಪಾತ: ಸಹನೆಯ ಕಟ್ಟೆಯೊಡೆದ ಆಕ್ರೋಶ

|
Google Oneindia Kannada News

ಮಂಗಳೂರು, ಜನವರಿ 04: ಮಂಗಳೂರು ಹೊರವಲಯದ ಕಾಟಿಪಳ್ಳ ಬಳಿ ಬರ್ಬರವಾಗಿ ಕೊಲೆಯಾದ ಭಜರಂಗ ದಳ ಕಾರ್ಯಕರ್ತ ದೀಪಕ್ ರಾವ್(32) ಹತ್ಯೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು: ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳುಮಂಗಳೂರು: ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಕಾಟಿಪಳ್ಳದ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಅವರನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರು. ಇತ್ತೀಚೆಗಷ್ಟೇ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಿಂದ ಪ್ರಕ್ಷುಬ್ಧವಾಗಿದ್ದ ಕರಾವಳಿ, ಮತ್ತೊಮ್ಮೆ ಅಶಾಂತಿಯಲ್ಲಿ ಬೇಯುತ್ತಿದೆ.

ದೀಪಕ್ ರಾವ್ ಕೊಲೆ ಪ್ರಕರಣ: ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿದೀಪಕ್ ರಾವ್ ಕೊಲೆ ಪ್ರಕರಣ: ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿ

ಮೃತ ದೀಪಕ್ ಶವದೆದುರು ಅವರ ಕುಟುಂಬಸ್ತರು ಮುಗಿಲುಮುಟ್ಟುವಂತೆ ರೋದಿಸುತ್ತಿದ್ದರೆ ಇತ್ತ ರಾಜಕೀಯ ಲೆಕ್ಕಾಚಾರವೂ ಆರಂಭವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಮರ್ಥವಾಗದ ರಾಜ್ಯ ಸರ್ಕಾರ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾವಳಿಯಲ್ಲಿ ಒಂದರಮೇಲೊಂದರಂತೆ ಮರುಕಳಿಸುತ್ತಿರುವ ಕೊಲೆ ಪ್ರಕರಣಗಳು ಜನಸಾಮಾನ್ಯನ ಸಹನೆಯ ಕಟ್ಟೆಯೊಡೆಯುವಂತೆ ಮಾಡಿದೆ.

Array

ಇನ್ನೆಷ್ಟು ಹೆಣ ಬೀಳಬೇಕು ನಿಮಗೆ?

ನಮ್ಮ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅರ್ಶದ್, ರಿಜ್ವಾನ್, ನೌಶದ್, ನವಾಜ್ ಮತ್ತು ನಿರ್ಶಾನ್ ಎಂಬುವವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ನ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಜನ ಪ್ರಾಣತ್ಯಾಗ ಮಾಡಬೇಕು? ಎಂದು ಬಿಜೆಪಿ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಪ್ರಶ್ನಿಸಿದ್ದಾರೆ.

ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

ಕಾಂಗ್ರೆಸ್ ಸರ್ಕಾರ ಮೌನ ಪ್ರೇಕ್ಷಕನಾಗಿದೆ!

ಕರ್ನಾಟಕದಲ್ಲಿ ಮತ್ತೆ ಹಿಂದು ಕಾರ್ಯಕರ್ತನ ಹತ್ಯೆಯಾಗಿದೆ. ದೀಪಕ್ ರಾವ್ ಹಾಡುಹಗಲಲ್ಲೇ ಕೊಲೆಯಾದರೂ ಇಲ್ಲಿನ ಕಾಂಗ್ರೆಸ್ ಸರ್ಕಾರ ಮೌನ ಪ್ರೇಕ್ಷಕನಾಗಿ ನೋಡುತ್ತಿದೆ. ಏಕೆಂದರೆ ಆತನನ್ನು ಸಾಯಿಸಿದವರೆಲ್ಲ ಕಾಂಗ್ರೆಸ್ ನ ಮತಬ್ಯಾಂಕ್ ಗಳು! ಎಂದು ಅಮಿತ್ ಮಾಳವೀಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಎಲ್ಲಿದ್ದೀರಾ?

ಪ್ರಕಾಶ್ ರೈ ಅವರೇ, ನಿಮ್ಮದೇ ಪಿಎಫ್ ಐ ಜನರಿಂದ ಮಂಗಳೂರಿನಲ್ಲಿ ಮತ್ತೆ ಮತ್ತೆ ಹತ್ಯೆಯಾಗುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ಈ ಜಾತ್ಯಾತೀತರೆಲ್ಲ ಈಗ ಎಲ್ಲ ಮಾಯವಾಗಿದ್ದೀರಿ? ಹಿಂದುಗಳು, ಬ್ರಾಹ್ಮಣರು ಸತ್ತರೆ ನೀವು ನಾಪತ್ತೆಯಾಗಿಬಿಡುತ್ತೀರಿ ಅಲ್ಲವೇ? ದೀಪಕ್ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರೀನಿಧಿ ಶ್ರೀನಿವಾಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಡೆಡ್ ಬಾಡಿ ಪೊಲಿಟಿಕ್ಸ್!

ಬಿಜೆಪಿಯದು ಯಾವಾಗಲೂ ಇಂಥ ಘಟನೆಗಳನ್ನು ತನ್ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದರಲ್ಲಿ ಎತ್ತಿದ ಕೈ. ಮಹಾದಾಯಿ ನದಿ ಹಂಚಿಕೆ ವಿವಾದವನ್ನು ಸರಿಯಾಗಿ ಇತ್ಯರ್ಥಗೊಳಿಸದ ಬಿಜೆಪಿಯವರು ಈಗ ದೀಪಕ್ ರಾವ್ ಹತ್ಯೆಯನ್ನು ತಮ್ಮ ಚುನಾವಣೆಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಬಿಜೆಪಿ ಡೆಡ್ ಬಾಡಿ ಪೊಲಿಟಿಕ್ಸ್! ಎಂದು ದಿ ರಿಯಾಲಿಸ್ಟಿಕ್ ಲಿಬರಲ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕಮ್ಯುನಿಸ್ಟರು ಏನುಮಾಡುತ್ತಿದ್ದಾರೆ?

ಕಮ್ಯುನಿಸ್ಟರು ಹಿಂದುಗಳನ್ನು(ದಲಿತರೂ ಸೇರಿದಂತೆ) ಭಾರತೀಯರು ಎಂದು ತಿಳಿದಿದ್ದಾರೋ ಇಲ್ಲವೋ? ಕರ್ನಾಟಕದಲ್ಲಿ ದೀಪಕ್ ರಾವ್ ಬರ್ಬರ ಹತ್ಯೆ ಮತ್ತು ಮಹಾರಾಷ್ಟ್ರ ಗಲಭೆಯಲ್ಲಿ ಮರಾಠಾ ಯುವಕನ ಹತ್ಯೆ ಇವುಗಳ ಕುರಿತು ಸೊಲ್ಲೆತ್ತದೆ, ಮೌನವಾಗಿಯೇ ಇರುವ ಅವರ ನಡೆ ಏನನ್ನು ವಿವರಿಸುತ್ತದೆ ಎಂದು ಸಾಕೇತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಹೆಣದೊಂದಿಗೆ ರಾಜಕೀಯ ಮಾಡಬೇಡಿ!

ದಯವಿಟ್ಟು ಹತ್ಯೆಯನ್ನು ರಾಜಕೀಯ ದಾಳವನ್ನಾಗಿಸುವುದನ್ನು ಬಿಡಿ. ಇಂಥ ಕೆಲಸಗಳು ಬಹುಶಃ 80-90 ರಲ್ಲಿ ನಡೆಯುತ್ತಿದ್ದವು. ಈಗಲೂ ಇಂಥದೇ ಕೀಳುಮಟ್ಟದ ರಾಜಕೀಯ ಮಾಡಬೇಡಿ. ತನಿಖೆ ಮುಂದುವರಿಯಲು ಬಿಡಿ. ಹೆಣದೊಂದಿಗೆ ರಾಜಕೀಯ ಮಾಡುವುದಕ್ಕೆ ಹೋಗಬೇಡಿ ಎಮದು ಕೇಶವ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
Many people on twitter express their outrage about murder of Deepak Rao in Mangaluru. 32-year-old Deepak Rao who is an activist of Hindu for organisation Bhajaranga Dal, stabbed to death in Katipalla at Surathkal, Mangaluru district on January 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X