ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂ.ಎಂ.ಕಲಬುರ್ಗಿ ಹತ್ಯೆ ಟ್ವಿಟ್, ಯುವಕನ ಬಂಧನ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆ.31 : ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಂತರ ಟ್ವಿಟ್ ಮಾಡಿದ್ದ ಭುವಿತ್ ಶೆಟ್ಟಿಯನ್ನು ಬಂಟ್ವಾಳ ಪೊಲೀಸರು ಮಂಗಳೂರಿನ ಸಮೀಪ ಬಂಧಿಸಿದ್ದಾರೆ. ಕಲಬುರ್ಗಿ ಅವರ ಹತ್ಯೆ ಬಳಿಕ ವಿವಾದಾತ್ಮಕ ಟ್ವಿಟ್ ಮಾಡಿದ್ದ ಭವಿತ್‌ ವಿರುದ್ಧ ಬಂಟ್ವಾಳ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಹಿಂದಿನ ಸುದ್ದಿ : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಹತ್ಯೆಯಾದ ಕೆಲವೇ ಗಂಟೆಗಳ ಬಳಿಕ ವಿವಾದಾತ್ಮಕ ಟ್ವಿಟ್ ಮಾಡಿದ್ದ ಯುವಕನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ವಿಟ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂಟ್ವಾಳದ ಯುವಕ ಭುವಿತ್ ಶೆಟ್ಟಿ ಅವರು ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಬಳಿಕ ಟ್ವಿಟ್ ಮಾಡಿದ್ದರು. ಬಂಟ್ವಾಳ ಪೊಲೀಸರು ಭುವಿತ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಭುವಿತ್ ಟ್ವಿಟ್ಟರ್ ಖಾತೆಯ ಮೂಲಕ ಭಾನುವಾರ ಬೆಳಗ್ಗೆ 10.41ಕ್ಕೆ ಎರಡು ಟ್ವಿಟ್‌ಗಳನ್ನು ಮಾಡಲಾಗಿದೆ. [ಕಲಬುರ್ಗಿ ಹತ್ಯೆಯ ತನಿಖೆ ಸಿಐಡಿಗೆ]

mm kalburgi

ಟ್ವಿಟ್ ನಲ್ಲೇನಿದೆ? : 'ಅಂದು ಅನಂತಮೂರ್ತಿ, ಇಂದು ಕಲಬುರ್ಗಿ, ಮುಂದಿನ ಸರದಿ ಪ್ರೊ.ಕೆ.ಎಸ್.ಭಗವಾನ್' ಎಂದು ಆ.30ರ ಭಾನುವಾರ ಭವಿತ್ ಟ್ವಿಟ್ ಮಾಡಿದ್ದರು.

murder

ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ರೀತಿಯ ಟ್ವಿಟ್ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ವಿಟ್ ಮಾಡಲು ಕಾರಣ ಏನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

tweeter
English summary
Mangaluru : Bantwal police filed a suo motu case against Bhuvith Shetty who made controversial tweet after murder of Hampi University former VC M.M. Kalburgi on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X