ಶಿರಾಡಿ ಘಾಟ್ ಸುರಂಗ ಮಾರ್ಗ ಕಾಮಗಾರಿ ಶೀಘ್ರ ಆರಂಭ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 16 : 'ಶಿರಾಡಿ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ' ಎಂದು ರಾಜ್ಯ ಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ. ಸುಮಾರು 12.41 ಕಿ.ಮೀ.ಗಳ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಈ ಕುರಿತು ಯೋಜನೆ ಸಿದ್ಧವಾಗುತ್ತಿದೆ.

ಕಾಪು ವಿಧಾನಸಭಾ ವ್ಯಾಪ್ತಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಶಿರ್ವಾ ರಸ್ತೆಯಲ್ಲಿ ನಡೆಯಲಿರುವ ರಸ್ತೆ ವಿಸ್ತರಣೆ ಸಹಿತ ದ್ವಿಪದ ರಸ್ತೆ ಕಾಮಗಾರಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 'ಗ್ರಾಮೀಣ ರಸ್ತೆ ಅಭಿವದ್ಧಿ ಪಡಿಸಲು ರಾಜ್ಯ ಸರ್ಕಾರ ಉತ್ತಮ ಸಾಧನೆ ಮಾಡುತ್ತಿದೆ' ಎಂದು ಹೇಳಿದರು. [ಶೀಘ್ರದಲ್ಲೇ ಶಿರಾಡಿ ಘಾಟ್ ಬೈಪಾಸ್ ಕಾಮಗಾರಿ : ಗಡ್ಕರಿ]

oscar fernandes

'ತಾನು ಹೆದ್ದಾರಿ ಸಚಿವನಾಗಿದ್ದಾಗ ಯೋಜನೆ ರೂಪಿಸಲಾಗಿದ್ದ ಶಿರಾಡಿ ಘಾಟಿ ರಸ್ತೆಯನ್ನು ಸುರಂಗ ಮಾರ್ಗವಾಗಿ ಪರಿವರ್ತಿಸುವ ಕಾರ್ಯಕ್ಕೆ ಅತೀ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಆರು ಸುರಂಗ ಮತ್ತು 10 ಸೇತುವೆಗಳನ್ನು ಒಳಗೊಂಡಿರುವ ಈ ಯೋಜನೆಗೆ ಸುಮಾರು 12,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ' ಎಂದು ಹೇಳಿದರು. [ಶಿರಾಡಿಯಲ್ಲಿ ಶೀಘ್ರ ವಾಹನ ಸಂಚಾರ ಬಂದ್]

ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, 'ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಸುಭಾಷ್ ನಗರ-ಪಾಜಕ-ಬೆಳ್ಳೆ ರಸ್ತೆಯನ್ನು 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಕಟಪಾಡಿ-ಶಿರ್ವ ರಸ್ತೆಯನ್ನು 7 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ' ಎಂದು ಹೇಳಿದರು. [ಶಿರಾಡಿ ಘಾಟ್: ಘಟಾನುಗಟಿ ಜನಪ್ರತಿನಿಧಿಗಳಿದ್ದರೂ ಏನು ಪ್ರಯೋಜನ?]

-
-
-
-

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಪುರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former union minister for road transport and highways Oscar Fernandes said, proposed tunnel by pass road at Shiradi Ghat work will begin soon. Shiradi Ghat connects Bengaluru with Mangaluru.
Please Wait while comments are loading...