8ನೇ ಪರಿಚ್ಛೇದಕ್ಕೆ ತುಳು, ಟ್ವೀಟ್‌ ಅಭಿಯಾನಕ್ಕೆ ಭರ್ಜರಿ ಬೆಂಬಲ

Subscribe to Oneindia Kannada

ಮಂಗಳೂರು, ಆಗಸ್ಟ್ 11: ಕರ್ನಾಟಕ ಕರಾವಳಿಯ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ನಿಟ್ಟಿನಲ್ಲಿ ಗುರುವಾರ ನಡೆದ ಟ್ವೀಟ್ ಅಭಿಯಾನ ಯಶಸ್ವಿಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಡೆಸಿದ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ರಾತ್ರಿ 8 ಗಂಟೆ ವೇಳೆಗೆ 45,200 ಮಂದಿ ಟ್ವೀಟ್‌ ಮಾಡಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ಇಂದು ಟ್ವಿಟ್ಟರ್ ಹಕ್ಕೊತ್ತಾಯ

ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾದ ಈ ಅಭಿಯಾನದಲ್ಲಿ #TuluTo8thSchedule ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿ ಜನರು ಬೆಂಬಲ ಸೂಚಿಸಿದರು. ಸಿನಿ ತಾರೆಯರು, ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಸಾವಿರಾರು ಮಂದಿ ಟ್ವೀಟ್ ನಲ್ಲೇ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.

"ದೇಶಾದ್ಯಂತ ಬಳಕೆಯಲ್ಲಿರುವ 15 ಭಾಷೆಗಳನ್ನು ಬಳಕೆ ಮಾಡಿಕೊಂಡು ಟ್ವೀಟ್‌ ಮಾಡಲಾಗಿದೆ. ಈ ಟ್ವೀಟ್‌ ಅಭಿಯಾನದಲ್ಲಿ ಕರಾವಳಿಯ ಜನರು ಮಾತ್ರವಲ್ಲದೆ ರಾಜ್ಯ, ರಾಷ್ಟ್ರಾದ್ಯಂತ ತುಳು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ವಿದೇಶದಲ್ಲಿರುವ ತುಳು, ಕನ್ನಡ ಅಭಿಮಾನಿಗಳು ತುಳು ಪರ ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ," ಎಂದು ಜೈ ತುಳುನಾಡು ಅಧ್ಯಕ್ಷ ಅಶ್ವತ್ಥ್‌ ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಟ್ವೀಟ್ ಅಭಿಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣ ಗೌಡ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಮಾಜಿ ಸಚಿವ ಸಿ.ಟಿ. ರವಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Tweets campaign was held on Thursday for the Tulu language to be added to Schedule 8 of the Constitution. By the end of 8 pm, 45,200 people tweeted in support for the campaign.
Please Wait while comments are loading...