'ಗುಡ್ಡದ ಭೂತ' ತುಳು ಸಿನಿಮಾ ಜನವರಿ 6ಕ್ಕೆ ಬೆಳ್ಳಿ ತೆರೆಗೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 6: ಶ್ರೀ ಕಟಿಲೇಶ್ವರಿ ಮೀಡಿಯಾ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಥ್ರಿಲ್ಲರ್ ಚಿತ್ರ ಗುಡ್ಡದ ಭೂತ' ಜನವರಿ 6ಕ್ಕೆ ತೆರೆಗೆ ಬರುತ್ತಿದೆ. ಮಂಗಳೂರಿನ ಪ್ರಭಾತ್, ಮಲ್ಟಿಫ್ಲೆಕ್ಸ್ ಸಿನಿ ಮಂದಿರ, ಪುತ್ತೂರು ಹಾಗೂ ಸಕಲೇಶಪುರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಎರಡನೇ ಹಂತದಲ್ಲಿ ಉಡುಪಿ ಸಹಿತ ಇತರ ಸ್ಥಳಗಳಲ್ಲಿ ಬಿಡುಗಡೆಯಾಗಲಿದೆ.

ಮೈನವಿರೇಳಿಸುವ, ಸುಂದರ ಸನ್ನಿವೇಶ ಒಳಗೊಂಡ ಈ ಚಿತ್ರ ಕುಟುಂಬ ಸಮೇತವಾಗಿ ನೋಡಬಹುದಾಗಿದ್ದು, ಹಿಂದೂ-ಮುಸ್ಲಿಂ ಬಾಂಧವ್ಯದ ಬಗ್ಗೆ ಆರಂಭದ ಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ ಉಡುಪಿಯ ಶೀರೂರು ಶ್ರೀಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.[ಜ. 8ರಂದು ಸುರತ್ಕಲ್ ನಲ್ಲಿ 'ಕುಡ್ಲ ತುಳು ಮಿನದನ' ಕಾರ್ಯಕ್ರಮ]

Tulu movie Guddada bhootha releasing on Jan 6th

ವಿವಿಧ ಪಕ್ಷಗಳ ನಾಯಕರಾದ ಯಶ್ಪಾಲ್ ಸುವರ್ಣ, ಯತೀಶ್ ಕರ್ಕೇರ, ಉದಯಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಸಂದೀಪ್ ಭಕ್ತ, ನಾಯಕಿಯಾಗಿ ಅಶ್ವಿತಾ, ಅಲ್ಲದೆ ದಿನೇಶ್ ಅತ್ತಾವರ ಪ್ರಮುಖ ಪಾತ್ರದಲ್ಲಿದ್ದಾರೆ.

Tulu movie Guddada bhootha releasing on Jan 6th

ಸುಭಾಷ್ ಬೋಳಾರ್ ಸಂಗೀತ ನಿರ್ದೇಶನ, ಪ್ರಕಾಶ್ ಪೂಜಾರಿ ಚಿತ್ರ ಸಂಭಾಷಣೆ ಬರೆದಿದ್ದು, ಟೈಟಲ್ ಹಾಡಿನೊಂದಿಗೆ ರೊಮ್ಯಾಂಟಿಕ್, ಮೆಲೋಡಿ, ಥ್ರಿಲ್‌ ಕೊಡುವ 3 ಹಾಡುಗಳಿವೆ. ಉಡುಪಿ ಮತ್ತು ಕಟೀಲು ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು, ಒಟ್ಟು 2 ಗಂಟೆ 17 ನಿಮಿಷಗಳ ಸಿನಿಮಾ ಆಗಿದೆ.['ತುಳುನಾಡ್ ತಿರ್ಗಾಟದ ತೇರ್'ಗೆ ಪೇಜಾವರ ಶ್ರೀ ಸ್ವಾಗತ]

ನಿರ್ದೇಶಕ ಸಂದೀಪ್ ಪಣಿಯೂರು ಈ ಹಿಂದಿನ ಗುಡ್ಡದ ಭೂತ' ಧಾರಾವಾಹಿಯಿಂದ ಸ್ಫೂರ್ತಿಗೊಂಡು, ಉತ್ತಮ ಸಂದೇಶ ಒಳಗೊಂಡ ಕಮರ್ಷಿಯಲ್ ಚಿತ್ರವನ್ನು ತಯಾರಿಸಿದ್ದಾರೆ ಎಂದು ಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Guddada bhootha- Tulu movie releasing on January 6th in Mangaluru, Puttur and Sakaleshpur. Later it will be released in Ududpi and other places.
Please Wait while comments are loading...