ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಖಲೆಯ 1584 ವಿದ್ಯಾರ್ಥಿಗಳಿಂದ ತೃತೀಯ ಭಾಷೆಯಾಗಿ ತುಳು ಅಧ್ಯಯನ

By Sachhidananda Acharya
|
Google Oneindia Kannada News

ಮಂಗಳೂರು, ಜೂನ್ 23: ತುಳು ಭಾಷೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದು ಒಟ್ಟು ತುಳು ಕಲಿಯುತ್ತಿರುವವರ ಸಂಖ್ಯೆ 1584ಕ್ಕೆ ತಲುಪಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಪ್ರಸ್ತುತ ಸಾಲಿನಲ್ಲಿ ಒಟ್ಟು 13 ಶಾಲೆಗಳು ಜಾರಿಗೆ ತಂದಿವೆ. 2016-17ರ ಸಾಲಿನ ಒಟ್ಟು 20 ಶಾಲೆಗಳು ತುಳುವನ್ನು ತೃತೀಯ ಭಾಷೆಯಾಗಿ ಜಾರಿಗೆ ತಂದಿದ್ದವು. ಹೀಗೆ ಪ್ರಸ್ತುತ ಒಟ್ಟು 33 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಭೋಧಿಸಲಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಮತ್ತು ಉಡುಪಿ ಜಿಲ್ಲೆಯಲ್ಲಿ 3 ಶಾಲೆಗಳಿವೆ ಎಂದು ತುಳು ಸಾಹಿತ್ಯ ಅಕಾಡೆಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Tulu learning students number goes up to 1584 in Dakshina Kannada and Udupi

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅತೀ ಹೆಚ್ಚಿನ 15, ಬೆಳ್ತಂಗಡಿಯಲ್ಲಿ 5, ಸುಳ್ಯ 4, ಬಂಟ್ವಾಳ 3, ಮಂಗಳೂರು 3 ಮತ್ತು ಉಡುಪಿಯ 3 ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ.

ಪ್ರಸ್ತುತ 2017-18ರ ಸಾಲಿನಲ್ಲಿ 33 ಶಾಲೆಗಳಲ್ಲಿ ಒಟ್ಟಾರೆ 1584 ವಿದ್ಯಾರ್ಥಿಗಳಿರುತ್ತಾರೆ.ಈ ಪೈಕಿ 6ನೇ ತರಗತಿಯಲ್ಲಿ 97, 7ನೇ ತರಗತಿಯಲ್ಲಿ 126, 8ನೇ ತರಗತಿಯಲ್ಲಿ 418, 9ನೇ ತರಗತಿಯಲ್ಲಿ 517 ಮತ್ತು 10ನೇ ತರಗತಿಯಲ್ಲಿ 426 ವಿದ್ಯಾರ್ಥಿಗಳು ತುಳುವನ್ನು ಕಲಿಯುತ್ತಿದ್ದಾರೆ.

2016-17ರ ಸಾಲಿನಲ್ಲಿ ಒಟ್ಟು 956 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದರು. ಇವರಲ್ಲಿ 283 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು ಮತ್ತು ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು.

English summary
In a historic record 1584 students learning Tulu language as a third language in education. It is the first time in last four years highest number of students who taken Tulu as a third language in Dakshina Kannada and Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X