ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ಇಂದು ಟ್ವಿಟ್ಟರ್ ಹಕ್ಕೊತ್ತಾಯ

By Sachhidananda Acharya
|
Google Oneindia Kannada News

ಮಂಗಳೂರು, ಆಗಸ್ಟ್ 9: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಾಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಹೋರಾಟಗಳು ಕೂಡ ನಡೆದಿವೆ ಆದರೆ ತುಳುವರ ಹೋರಾಟಕ್ಕೆ ಇನ್ನೂ ಜಯಸಿಕ್ಕಿಲ್ಲ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಜೈ ತುಳುನಾಡು ಯುವಪಡೆಗಳು ಮುಂದಾಗಿದ್ದು, ಒಂದು ದಿನದ ಟ್ವೀಟ್ ಅಭಿಯಾನ ನಡೆಸಲು ನಿರ್ಧರಿಸಿವೆ.

ಈಗಾಗಲೇ ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ನಡೆಸಲಾಗಿದ್ದು, ದೊಡ್ಡಮಟ್ಟದಲ್ಲಿ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾಗುತ್ತಿದೆ. ಜೈ ತುಳುನಾಡು ತಂಡದಲ್ಲಿ 20ಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳು, 15ಕ್ಕೂ ಅಧಿಕ ಫೇಸುಬುಕ್ ಪೇಜ್ ಗಳ ಮುಖಾಂತರ ಪ್ರಚಾರ ನಡೆಸಲಾಗುತ್ತಿದೆ. ಇದು ಮಾತ್ರವಲ್ಲದೆ ಆಡಿಯೋ , ವಿಡಿಯೋ ರೆಕಾರ್ಡ್ ಗಳನ್ನು ಕೂಡ ಹರಿಯಬಿಡಲಾಗುತ್ತಿದೆ.

ದಾಖಲೆಯ 1584 ವಿದ್ಯಾರ್ಥಿಗಳಿಂದ ತೃತೀಯ ಭಾಷೆಯಾಗಿ ತುಳು ಅಧ್ಯಯನದಾಖಲೆಯ 1584 ವಿದ್ಯಾರ್ಥಿಗಳಿಂದ ತೃತೀಯ ಭಾಷೆಯಾಗಿ ತುಳು ಅಧ್ಯಯನ

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ #TuluTo8thSchedule ಹ್ಯಾಷ್ ಟ್ಯಾಗ್ ಬಳಸಿ ಈ ಸಂಬಂಧ ಟ್ವೀಟ್ ಮಾಡಲು ಹೋರಾಟಗಾರರು ಕರೆ ನೀಡಿದ್ದಾರೆ.

Tulu to be added to Schedule 8 of the Constitution, Twitter campaign on tomorrow

ಜೈ ತುಳುನಾಡು ಟೀಮ್ ನಲ್ಲಿ ಯುವಕರೇ ಹೆಚ್ಚಾಗಿದ್ದು, ದೊಡ್ಡ ಮಟ್ಟದಲ್ಲಿ ತುಳು ಭಾಷೆ ಪ್ರಚಾರ ನಡೆಸಲಾಗುತ್ತಿದೆ. ಟ್ವಿಟ್ಟರ್ ಇಲ್ಲದವರಿಗೆ ಕೂಡಲೇ ಟ್ವಿಟ್ಟರ್ ಖಾತೆ ತೆರೆಯುವಂತೆ ಸೂಚನೆಯನ್ನೂ ನೀಡಲಾಗಿದೆ.

ಉಡುಪಿ,ಬ್ರಹ್ಮಾವರ, ಪುತ್ತೂರು, ಮುಲ್ಕಿ, ಬಂಟ್ವಾಳ, ಕಾರ್ಕಳ ಸೇರಿದಂತೆ ನಾನಾ ಕಡೆ ಪ್ರತ್ಯೇಕ ಗ್ರೂಪ್ ಮಾಡಿ ಪ್ರಚಾರ ನಡೆಸಲಾಗಿದ್ದು, ಕನಿಷ್ಠ 15ಸಾವಿರ ಟ್ವಿಟ್ ಮಾಡುವ ಉದ್ದೇಶ ಹೊಂದಲಾಗಿದೆ.

ತುಳುವಿಗೆ ಮಾತ್ರ ಹಿನ್ನಡೆ

ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಹಲವು ಭಾಷೆಗಳ ಜತೆ ಪೈಪೋಟಿಗೆ ನಿಂತಿದೆ. ಪಂಚ ದ್ರಾವಿಡ ಭಾಷೆಗಳಲ್ಲಿರುವ ಕನ್ನಡ, ಮಲಯಾಳಂ, ತಮಿಳು, ತೆಲುಗು ಈಗಾಗಲೇ 8ನೇ ಪರಿಚ್ಚೇದದಡಿ ಸೇರಿದ್ದರೂ ತುಳು ಭಾಷೆ ಮಾತ್ರ ಸೇರ್ಪಡೆಯಾಗದೆ ಬಾಕಿಯುಳಿದಿದೆ.

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂದು ಹಲವು ವರ್ಷದಿಂದ ಜನಪ್ರತಿನಿಧಿಗಳನ್ನು ಭೇಟಿಯಾಗಿ, ಮನವಿಗಳನ್ನು ಸಲ್ಲಿಸುತ್ತಲೇ ಇದ್ಧಾರೆ. ಆದರೂ ಪ್ರಯೋಜನವಾಗಿಲ್ಲ.

ಆದರೆ, ಈಗ ಟ್ವಿಟರ್ ನಂತಹ ಸಾಮಾಜಿಕ ಜಾಲತಾಣವನ್ನು ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಬಳಕೆ ಮಾಡುತ್ತಿದ್ದು ಅದರ ಮುಖೇನವೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದಕ್ಕಾಗಿ ತುಳುವರೆಲ್ಲ ಸೇರಿ ಒಂದು ದಿನ ಟ್ವೀಟ್ ಅಭಿಯಾನ ನಡೆಸಲು ನಿರ್ಧರಿಸಿ ಆಡಳಿತದ ಗಮನಸೆಳೆಯುವ ಪ್ರಯತ್ನ ಇದಾಗಿದೆ.

English summary
The Twitter campaign will be held on 10th August, urging the Tulu language to be added to Schedule 8 of the Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X