ಮಂಗಳೂರು, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 25 : ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 25ರಿಂದ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರ ಜು.25 ಮತ್ತು 26ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ರಜೆ ಇಲ್ಲ. ಈ ಮುಷ್ಕರದಿಂದ ಹೆಚ್ಚು ತೊಂದರೆಯಾಗದ ಹಿನ್ನಲೆಯಲ್ಲಿ ಈ ಎರಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆಯಿಂದ ವಿನಾಯಿತಿ ನೀಡಲಾಗಿದೆ.[Live : ರಸ್ತೆಗಿಳಿಯದ ಬಸ್ಸುಗಳು, ಜನರ ಪರದಾಟ]

'ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ಬಸ್ಸು, ವಾಹನಗಳ ಮೇಲೆ ಹೆಚ್ಚಾಗಿ ಅವಲಂಭಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ಇರಲಿದ್ದು , ಯಾವುದೇ ರಜೆ ಇರುವುದಿಲ್ಲ, ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಖಾಸಗಿ ಬಸ್ಸು, ವಾಹನಗಳಲ್ಲಿ ಆಗಮಿಸಬೇಕು' ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.[ಸಾರಿಗೆ ನೌಕರರ ಮುಷ್ಕರ, ಸಂಧಾನ ಸಭೆ ವಿಫಲ]

ಧರ್ಮಸ್ಥಳ, ಸುಳ್ಯ, ಪುತ್ತೂರು ಹಾಗೂ ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಬುಸ್ ಸಂಚಾರ ಇಲ್ಲದಿರುವುದಿಂದ ವಿಧ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಉಡುಪಿ ಜಿಲ್ಲೆಯಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ....

ಖಾಸಗಿ ಬಸ್ಸುಗಳದ್ದೇ ಪಾರುಪತ್ಯ

ಖಾಸಗಿ ಬಸ್ಸುಗಳದ್ದೇ ಪಾರುಪತ್ಯ

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಖಾಸಗಿ ಬಸ್ಸುಗಳದ್ದೆ ಪಾರುಪತ್ಯ. ವಿದ್ಯಾರ್ಥಿಗಳು, ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಸರ್ಕಾರಿ ಬಸ್ಸುಗಳು ಇದ್ದರೂ, ಖಾಸಗಿ ಬಸ್ಸುಗಳ ಮೇಲೆ ಅವಲಂಬಿತರಾದರವೇ ಹೆಚ್ಚು ಆದ್ದರಿಂದ ಎರಡೂ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ.

ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಜಿಲ್ಲಾಧಿಕಾರಿಗಳ ಸ್ಪಷ್ಟನೆ

'ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ. ಜನರು ಮತ್ತು ವಿದ್ಯಾರ್ಥಿಗಳು ಸಂಚಾರವೇ ಹೆಚ್ಚು ವಾಹನಗಳ ಮೇಲೆ ಹೆಚ್ಚಾಗಿ ಅವಲಂಭಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲಿ ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ಇರಲಿದೆ' ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಏಕೆ?

ಸಾರಿಗೆ ನೌಕರರ ಮುಷ್ಕರ ಏಕೆ?

'ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಮುಖ್ಯಮಂತ್ರಿಗಳು ಶೇ 10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಉಳಿದ ಬೇಡಿಕೆಗಳ ಈಡೇರಿಕೆಗೆ 20 ದಿನಗಳ ಗಡುವು ಕೇಳಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮುಷ್ಕರ ನಡೆಸಲಾಗುತ್ತಿದೆ' ಎಂದು ಎಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ಹೇಳಿದ್ದಾರೆ.

'ಶೇ 30ರಷ್ಟು ವೇತನ ಹೆಚ್ಚಳ ಸಾಧ್ಯವೇ ಇಲ್ಲ'

'ಶೇ 30ರಷ್ಟು ವೇತನ ಹೆಚ್ಚಳ ಸಾಧ್ಯವೇ ಇಲ್ಲ'

'ಸಾರಿಗೆ ನೌಕರರ ಯೂನಿಯನ್‌ಗಳು ಹಠಮಾರಿ ಧೋರಣೆ ಅನುಸರಿಸುತ್ತಿವೆ. ನಾವು ಸಹ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅವರು ಹೇಳಿದಂತೆ ಶೇ 30 ರಿಂದ 35ರಷ್ಟು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಎಷ್ಟು ಸರ್ಕಾರಿ ಬಸ್ಸುಗಳಿವೆ?

ಎಷ್ಟು ಸರ್ಕಾರಿ ಬಸ್ಸುಗಳಿವೆ?

ಬಿಎಂಟಿಸಿ 6,700
ಕೆಎಸ್ಆರ್‌ಟಿಸಿ 8,300
ಎನ್‌ಡಬ್ಲ್ಯುಕೆಆರ್‌ಟಿಸಿ 4,700
ಎನ್‌ಇಕೆಆರ್‌ಟಿಸಿ 4,300. ಸುಮಾರು 1.25 ಲಕ್ಷ ನೌಕರರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Road Transport Corporation employees strike July 25, 2016. Government announced two days holiday for school and colleges. No holiday for schools in Dakshina Kannada and Udupi district.
Please Wait while comments are loading...