ದಕ್ಷಿಣ ಕನ್ನಡ, ಉಡುಪಿಯಲ್ಲಿ ಮುಷ್ಕರದ ಬಿಸಿ ಹೇಗಿದೆ?

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 25 : ಖಾಸಗಿ ಬಸ್ಸುಗಳ ಪಾರುಪತ್ಯವಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸರ್ಕಾರಿ ಬಸ್ಸುಗಳ ಮುಷ್ಕರಿಂದ ಹಲವು ಜನರಿಗೆ ತೊಂದರೆಯಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಭಾನುವಾರ ರಾತ್ರಿಯಿಂದಲೇ ಸರ್ಕಾರಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಮಂಗಳೂರು ನಿಲ್ದಾಣದಿಂದ ರಾತ್ರಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಗೆ ಹೋಗುವ ಬಸ್ಸುಗಳು ಸಂಚಾರ ನಡೆಸಿಲ್ಲ.[ಮಂಗಳೂರು, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ]

ರಾತ್ರಿ 12ಗಂಟೆ ಬಳಿಕ ಮುಷ್ಕರ ಆರಂಭಗೊಂಡಿದ್ದರಿಂದ ದಾರಿ ಮಧ್ಯೆ ಸಂಚಾರಕ್ಕೆ ಅಡಚಣೆ ಆಗುವ ಹಿನ್ನಲೆಯಲ್ಲಿ ಚಾಲಕರು ಬಸ್ಸುಗಳನ್ನು ಡಿಪೋದಲ್ಲೇ ನಿಲ್ಲಿಸಿದ್ದಾರೆ. ಇದರಿಂದಾಗಿ ಪ್ರಯಾಣ ರದ್ದುಗೊಂಡಿದೆ. ಮುಂಗಡ ಟಿಕೆಟ್ ಬುಕ್ ಮಾಡಿದ ಜನರಿಗೆ ಹಣವನ್ನು ವಾಪಸ್ ಮಾಡಲಾಗಿದೆ.[ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಏಕೆ, ಏನು?]

ಸೋಮವಾರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳನ್ನು ಅವಲಂಭಿಸಬೇಕಾಗಿದ್ದರಿಂದ ಪ್ರಯಾಣಿಕರು ದಟ್ಟಣೆ ಜಾಸ್ತಿ ಇತ್ತು. ಮಂಗಳೂರಿನಲ್ಲಿ 403 ಖಾಸಗಿ ನಗರ ಸಾರಿಗೆ ಬಸ್ ಗಳಿವೆ. ಅವಿಬಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಸಂಪರ್ಕಿಸುವ 800 ಖಾಸಗಿ ಮತ್ತು ಎಕ್ಸ್ ಪ್ರೆಸ್ ಬಸ್‌ಗಳಿವೆ. ಮಂಗಳೂರು , ಉಡುಪಿ , ಕಾರ್ಕಳ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಹಾವಳಿ ಇರುವುದರಿಂದ ಮುಷ್ಕರದ ಬಿಸಿ ಹೆಚ್ಚು ತಟ್ಟಿಲ್ಲ.[ಸಾರಿಗೆ ಮುಷ್ಕರ: ಕ್ರಿಕೆಟ್ ಮೈದಾನವಾದ ಮೆಜೆಸ್ಟಿಕ್]

ಪರದಾಡಿದ ಪ್ರಯಾಣಿಕರು

ಪರದಾಡಿದ ಪ್ರಯಾಣಿಕರು

ಶನಿವಾರ ಮತ್ತು ಭಾನುವಾರದ ರಜೆಗೆ ಬಂದವರು ರಾತ್ರಿ ವಾಪಸ್ ತೆರಳು ಪರದಾಡಿದರು. ಆದರೆ, ಖಾಸಗಿ ಬಸ್ ಸಂಚಾರ ಎಂದಿನಂತೆ ಇತ್ತು. ಹುಬ್ಬಳ್ಳಿಗೆ ತೆರಳುವ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ, ಪ್ರಯಾಣಿಕರು ರಾತ್ರಿಯಿಂದ ಮಂಗಳೂರಿನ ನಿಲ್ದಾಣದಲ್ಲಿಯೇ ಪರದಾಡಬೇಕಾಯಿತು.

ಸರ್ಕಾರಿ ಬಸ್ ಅವಲಂಬಿಸಿದ್ದಾರೆ

ಸರ್ಕಾರಿ ಬಸ್ ಅವಲಂಬಿಸಿದ್ದಾರೆ

ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಬಂಟ್ವಾಳ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳನ್ನೇ ಅವಲಂಭಿಸಿದ್ದಾರೆ. ಅಲ್ಲದೆ ಗ್ರಾಮಾಂತರ ಪ್ರದೇಶದ ಒಳಭಾಗದಲ್ಲಿ ಹೆಚ್ಚಿನ ಬಸ್ಸುಗಳು ಓಡಾಡುತ್ತಿವೆ. ಬಸ್ಸುಗಳು ಸಂಚಾರ ನಡೆಸದ ಕಾರಣ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಿದರು.

ಹೆಚ್ಚು ಬಸ್ ಪಾಸ್ ಹೊಂದಿದ್ದಾರೆ

ಹೆಚ್ಚು ಬಸ್ ಪಾಸ್ ಹೊಂದಿದ್ದಾರೆ

ರಾಜ್ಯದಲ್ಲಿಯೇ ಅತ್ಯಧಿಕ ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿರುವ ತಾಲೂಕು ಪುತ್ತೂರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಪುತ್ತೂರು ನಗರಕ್ಕೆ ಬಂದು ಹೋಗುತ್ತಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳನ್ನೇ ಅವಲಂಭಿಸಿದ್ದಾರೆ. ಮುಷ್ಕರದಿಂದಾಗಿ ಇವರು ಸಂಕಷ್ಟ ಅನುಭವಿಸಿದರು.

'ಬಸ್ ಸಂಚಾರ ನಿಲ್ಲಿಸಿದ್ದು ಸರಿಯಲ್ಲ'

'ಬಸ್ ಸಂಚಾರ ನಿಲ್ಲಿಸಿದ್ದು ಸರಿಯಲ್ಲ'

'ಧರ್ಮಸ್ಥಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ಬಸ್ ಡಿಪೋದಲ್ಲಿ ಅಧಿಕಾರಿಗಳು ಮುಷ್ಕರದ ನೆಪ ಹೇಳಿ ಬಸ್‌ಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಈ ಮಾರ್ಗದಲ್ಲಿ ಓಡಾಡುವ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ರೀತಿ ಬಸ್ ಸಂಚಾರ ರದ್ದು ಮಾಡಿರುವುದು ಸರಿಯಲ್ಲ' ಎಂದು ವಿದ್ಯಾರ್ಥಿ ವಿಶಾಲ್ ಶೆಟ್ಟಿ ಪುತ್ತೂರು ಹೇಳಿದರು.

ಖಾಸಗಿ ಬಸ್ ಪಾರುಪತ್ಯ

ಖಾಸಗಿ ಬಸ್ ಪಾರುಪತ್ಯ

ಮಂಗಳೂರಿನಲ್ಲಿ 403 ಖಾಸಗಿ ನಗರ ಸಾರಿಗೆ ಬಸ್ ಗಳಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಸಂಪರ್ಕಿಸುವ 800 ಖಾಸಗಿ ಮತ್ತು ಎಕ್ಸ್ ಪ್ರೆಸ್ ಬಸ್‌ಗಳಿವೆ. ಮಂಗಳೂರು , ಉಡುಪಿ , ಕಾರ್ಕಳ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಹಾವಳಿ ಇರುವುದರಿಂದ ಮುಷ್ಕರದ ಬಿಸಿ ಹೆಚ್ಚು ತಟ್ಟಿಲ್ಲ.

ಶಾಲೆಗಳಿಗೆ ರಜೆ ಇಲ್ಲ

ಶಾಲೆಗಳಿಗೆ ರಜೆ ಇಲ್ಲ

'ವಿದ್ಯಾರ್ಥಿಗಳು, ಸಾರ್ವಜನಿಕರು ಖಾಸಗಿ ಬಸ್ಸು, ವಾಹನಗಳ ಮೇಲೆ ಹೆಚ್ಚಾಗಿ ಅವಲಂಭಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ಇರಲಿದ್ದು , ಯಾವುದೇ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸ್ಪಷ್ಟಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Road Transport Corporation employees strike does not affect Udupi and Dakshina Kannada district. No holiday for schools and colleges.
Please Wait while comments are loading...