ಮಂಗಳೂರು : ಶಾಲಾ ಬಸ್ಸುಗಳ ಮೇಲೆ ಪೊಲೀಸರು ಕಣ್ಣು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 23 : ಕುಂದಾಪುರದಲ್ಲಿ ಮಂಗಳವಾರ ನಡೆದ ಅಪಘಾತದ ನಂತರ ಪೊಲೀಸರು ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ತಪಾಸಣೆ ಆರಂಭಿಸಿದ್ದಾರೆ. ಪೊಲೀಸರ ಕ್ರಮದಿಂದ ಗಾಬರಿಗೊಂಡ ಕೆಲವು ವಾಹನಗಳ ಚಾಲಕರು, ಮಕ್ಕಳನ್ನು ಅರ್ಧ ದಾರಿಯಲ್ಲಿ ಇಳಿಸಿ ಪರಾರಿಯಾಗಿದ್ದಾರೆ.

ಬುಧವಾರ ಮತ್ತು ಗುರುವಾರ ಬೆಳಗ್ಗೆ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದ್ದಾರೆ. ಇನ್ನೂ ಎರಡು ಮೂರು ದಿನಗಳ ಕಾಲ ಈ ತಪಾಸಣೆ ಮುಂದುವರೆಯಲಿದೆ. ಶಾಲಾ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿಕೊಳ್ಳಲು ಜೂನ್ 30ರ ತನಕ ಸಮಯ ನೀಡಲಾಗಿದೆ. [ಶಾಲಾ ವಾಹನಗಳು ಪಾಲಿಸಬೇಕಾದ ನಿಯಮಗಳು]

school

ಜುಲೈ 1ರಿಂದ ಮಾರ್ಗಸೂಚಿಗಳನ್ನು ಪಾಲಿಸದ ಎಲ್ಲಾ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಚಾರಿ ಪೊಲೀಸರು ಮತ್ತು ಆರ್‌ಟಿಓಗಳಿಗೆ ಸೂಚನೆ ಕೊಟ್ಟಿದ್ದಾರೆ. [ಕುಂದಾಪುರ : ಭೀಕರ ಅಪಘಾತ, 8 ಶಾಲಾ ಮಕ್ಕಳ ದುರ್ಮರಣ]

ಪೋಷಕರು ಮಾಡಬೇಕಾದದ್ದೇನು?
* ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಅಲ್ಲಿಯ ಮೂಲ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಿ
* ಪೋಷಕರ ಸಭೆಯಲ್ಲಿ ಶಾಲಾ ಬಸ್‌ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ
* ಶಾಲೆಯ ಬಸ್ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೆ ಶಾಲೆಗೆ ಮಾಹಿತಿ ಕೊಡಿ
* ನಿಮ್ಮದೇ ಖಾಸಗಿ ವ್ಯವಸ್ಥೆಯಾಗಿದ್ದರೆ ಸಂಬಂಧಪಟ್ಟ ಚಾಲಕನನ್ನು ಪ್ರಶ್ನಿಸಿ
* ಚಾಲಕ ಮಿತಿ ಮೀರಿದ ವೇಗದಲ್ಲಿ ವಾಹನವನ್ನು ಓಡಿಸಿದರೆ ಶಾಲಾ ಮಂಡಳಿಗೆ ತಿಳಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru traffic police conducted an inspection drive of various school vehicles and warned the drivers carrying more children than the limit.
Please Wait while comments are loading...