ಟೋಲ್ ಎಫೆಕ್ಟ್, ಮಂಗ್ಳೂರು ಖಾಸಗಿ ಬಸ್ ಪ್ರಯಾಣ ದರ ಏರಿಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ. 09 : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಬಳಿ ಟೋಲ್ ಸಂಗ್ರಹ ಆರಂಭಿಸುತ್ತಿದ್ದಂತೆ ಇತ್ತ ಏಕಾಏಕಿ ಮಂಗಳೂರು - ಉಡುಪಿ ಮತ್ತು ಕುಂದಾಪುರ ನಡುವೆ ಸಂಚರಿಸುವ ಖಾಸಗಿ ಬಸ್ಸು ಗಳ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ.

ಕಳೆದ ಹಲವು ದಿನಗಳಿಂದ ಏರಿಕೆಗೊಂಡಿರುವ ದರವನ್ನು ಕಂಡಕ್ಟರುಗಳು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಬಸ್ ಮಾಲೀಕರು ದರ ಏರಿಕೆಯ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಏರಿಕೆ ಮಾಡಿರುವ ಕ್ರಮವನ್ನು ಪ್ರಯಾಣಿಕರು ಖಂಡಿಸಿದ್ದಾರೆ.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]

Toll burden? Private buses in coast abruptly hike bus fares

ಹೆದ್ದಾರಿಯಲ್ಲಿ ಟೋಲ್ ಶುಲ್ಕ ಆರಂಭಗೊಂಡಿದ್ದರಿಂದ ಬಸ್ ಮಾಲೀಕರು ಟೋಲ್ ಹಣದ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟೋಲ್ ಗೇಟುಗಳಲ್ಲಿ ಶುಲ್ಕ ಸಂಗ್ರಹ ಆರಂಭವಾದ ಮುನ್ನವೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ನಾವೀಗ ಅದನ್ನು ಪಡೆದುಕೊಳುತ್ತಿದ್ದೇವೆ ಎಂದು ಕೆಲವು ಬಸ್ ನಿರ್ವಾಹಕರು ಹೇಳುತ್ತಿದ್ದಾರೆ.

'ನಗರ ಸಾರಿಗೆ ಪ್ರಾಧಿಕಾರ ನಮಗೆ ಪ್ರಯಾಣ ದರ ಏರಿಕೆ ಮಾಡಿಕೊಟ್ಟಿದೆ, ಆದರೆ, ನಾವು ಅದನ್ನು ಕೇವಲ ನಾಲ್ಕು ದಿನಗಳ ಹಿಂದಿನಿಂದದ ಪಡೆದುಕೊಳುತ್ತಿದ್ದೇವೆ.

Toll burden? Private buses in coast abruptly hike bus fares

ಟಿಕೆಟ್ ಮಷೀನ್ ಸಮಸ್ಯೆಯಿಂದಾಗಿ ಇದನ್ನು ಪಡೆದುಕೊಳ್ಳಲು ವಿಳಂಬವಾಗಿದೆ. ಉಡುಪಿಯ ನಗರ ಸಾರಿಗೆ ಬಸ್ಸು ಗಳು ಕೂಡ ಶೀಘ್ರವೇ ಪ್ರಯಾಣ ದರ ಹೆಚ್ಚಿಸಲಿವೆ' ಎಂದು ಕೆನರಾ ಬಸ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ ಸುರೇಶ ನಾಯಕ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಟೋಲ್ ಮತ್ತು ಖಾಸಗಿ ಬಸ್ ಮಾಲೀಕರ ಮಧ್ಯೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿರುವುದಂತೂ ಸತ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Certain private buses moving on the highway between the city, Udupi and Kundapur have suddenly hiked bus fares since the last some days. The passengers have been caught unawares by this unexpected hike, as the bus owners had not given advance indication of their intention.
Please Wait while comments are loading...