ಶ್ವಾನ ಸಂತಾನ ಹರಣಕ್ಕೆ ಪ್ರಾಣಿ ಸಂರಕ್ಷಣಾ ಟ್ರಸ್ಟ್ ಬದ್ಧ

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 25: ಬೀದಿನಾಯಿಗಳ ಕಾಟ ಬೇಸತ್ತು ಮಂಗಳೂರಿನ ಪಾಲಿಕೆ ಅಮಾನವೀಯವಾಗಿ ಅವುಗಳನ್ನು ಸಾಯಿಸಿ ಡಂಪಿಂಗ್ ಯಾರ್ಡ್ನಲ್ಲಿ ಹಾಕುತ್ತಿದ್ದವರನ್ನು ನೋಡಿದ ಪ್ರಾಣಿ ಸಂರಕ್ಷಣಾ ಟ್ರಸ್ಟ್ ಸರ್ವೆ ಮಾಡಿ ನಾಯಿಗಳನ್ನು ಕೊಲ್ಲುವುದಕ್ಕಿಂತ ಅದರ ಸಂತಾನ ಹರಣ ಮಾಡಲು ಮುಂದಾಗಿದೆ.

ಮಂಗಳೂರಲ್ಲಿ ಪಾಲಿಕೆ ಆದೇಶದ ಪ್ರಕಾರ ನಾಯಿಗಳನ್ನ ಹಿಡಿಯುವವರು ತಂತಿಗಳನ್ನ ಬಳಸಿ ನಾಯಿಗಳನ್ನ ಹಿಡಿಯುತ್ತಿದ್ದರು. ಅಲ್ಲದೇ ಸಾಯುವ ತನಕ ಅಮಾನವೀಯವಾಗಿ ಹೊಡೆದು ಕೊಲ್ಲುತ್ತಿದ್ದರು. ಇದೆಲ್ಲಾ ನಡೆಯುತ್ತಿದ್ದದ್ದು ಸಾರ್ವಜನಿಕ ವಲಯದಲ್ಲಿ ಸತ್ತು ಹೋದ ನಾಯಿಗಳನ್ನ ವಾಮಂಜೂರಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಎಸೆಯಲಾಗುತ್ತಿತ್ತು. ಇದನ್ನು ಕಂಡ ಪ್ರಾಣಿ ಸಂರಕ್ಷಣಾ ಟ್ರಸ್ಟ್ ಸಹಾಯದಲ್ಲಿ ಬೀದಿ ನಾಯಿಗಳ ಸಂತತಿಯನ್ನ ಮಾನವೀಯ ವಿಧಾನದಲ್ಲಿ ನಿಯಂತ್ರಿಸಲು ಮುಂದೆ ಬಂದಿದೆ. ಇದಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಹಕರಿಸಿದೆ.[ಜಗತ್ತಿನ ಹಿರಿಯ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ]

dog

ಸಂತತಿ ನಿಯಂತ್ರಣ ಹೇಗೆ..?
ವಾರ್ಡ್ ಪ್ರಕಾರ ಬೀದಿ ನಾಯಿಗಳನ್ನ ಪತ್ತೆ ಹಚ್ಚಲಾಗುತ್ತದೆ. ಅಂದಾಜಿನ ಪ್ರಕಾರ ಒಂದೊಂದು ವಾರ್ಡ್ ನಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಬೀದಿ ನಾಯಿಗಳು ಕಾಣಸಿಗುತ್ತವೆ. ಇವುಗಳನ್ನ ಹಿಡಿದು ಜನನ ನಿಯಂತ್ರಣ ಚಿಕಿತ್ಸೆ ನೀಡಲಾಗುತ್ತದೆ. ಈ ಕೆಲಸವನ್ನು ಸರ್ಕಾರೇತರ ಸಂಸ್ಥೆ ಎಸಿಟಿ , ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ಹಿಡಿದು ಚುಚ್ಚುಮದ್ದು ನೀಡುತ್ತದೆ. ಜೊತೆಗೆ ರೇಬೀಸ್ ಇಂಜೆಕ್ಷನ್ ಸಹ ನೀಡಲಾಗುತ್ತದೆ.

ಯಾವ ನಾಯಿಗೆ ಚಿಕಿತ್ಸೆ ನೀಡಲಾಗಿದೆ ಎಂಬುದನ್ನ ಅರಿಯಲು ಚುಚ್ಚುಮದ್ದು ನೀಡಿದ ನಾಯಿಗಳ ಚರ್ಮದಲ್ಲಿ 'ವಿ' ಆಕಾರದ ಗುರುತು ಮಾಡಲಾಗುತ್ತದೆ. ಇದನ್ನ ಚರ್ಮ ಕತ್ತರಿಸಿ ಗುರುತು ಮಾಡಲಾಗುತ್ತದೆ. ಒಂದು ನಾಯಿಯ ಜನನ ನಿಯಂತ್ರಣ ಚಿಕಿತ್ಸಾ ವೆಚ್ಚ ರು 445. 2015 ರಲ್ಲಿ ಕೇವಲ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಮಾಡಿದ ಖರ್ಚು ರು 13,45,235.[ದನದ ಕರುವಿಗೆ ಹಾಲುಣಿಸುವ ವಿಚಿತ್ರ ಶ್ವಾನ]

ಎಲ್ಲೆಲ್ಲಿ ಬೀದಿ ನಾಯಿಗಳು ಹೆಚ್ಚು..?
ಸರ್ವೆ ಮಾಡಿದಾಗ ಬೀದಿ ನಾಯಿಗಳು ಹೆಚ್ಚಾಗಿ ಕಂಡು ಬಂದಿದ್ದು ಕಸದ ತೊಟ್ಟಿಗಳ ಬಳಿ, ಮೀನು, ಆಡು ಮಾಂಸದ ಮಾರುಕಟ್ಟೆಗಳಲ್ಲಿ. ಅಷ್ಟೇ ಅಲ್ಲ, ರಸ್ತೆ ಬದಿ ಇರುವ ಗೂಡಂಗಡಿ, ಹೋಟೆಲ್ ಹಾಗೂ ಬಸ್ ನಿಲ್ದಾಣಗಳಲ್ಲಿ...ಹೀಗೆ ನಗರದಲ್ಲಿ ಸದ್ಯ ಮೂರು ಸಾವಿರಕ್ಕಿಂತಲೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To Vasectomy dogs Ahead of the Animal Protection Trust. Stop catching dogs Trust Corporation allowed to vasectomy.
Please Wait while comments are loading...