ಟಿಪ್ಪು ಜಯಂತಿ ರದ್ದತಿಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಗ್ರಹ

By: ಮಂಗಳೂರು ಪ್ರತಿಸಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್. 14 : ರಾಜ್ಯ ಸರಕಾರ ನವೆಂಬರ್ 10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ಕೂಡಲೇ ಕೈಬಿಡಬೇಕು ಎಂದು ದಕ್ಷಿಣ ಕನ್ನಡ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಕಿಶೋರ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟಿಪ್ಪು ಕನ್ನಡ ವಿರೋಧಿ. ತನ್ನ ಆಡಳಿತಾವಧಿಯಲ್ಲಿ ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಅಳವಡಿಸಿದ್ದ. ಕೊಡವರ ಸಹಿತ ಹಿಂದುಗಳ ಮತಾಂತರ ಮತ್ತು ಹತ್ಯೆ ನಡೆಸಿದಲ್ಲದೆ ದ.ಕ. ಜಿಲ್ಲೆಯಲ್ಲಿ ಅನೇಕ ಚರ್ಚ್‌ಗಳ ಮೇಲೆ ದಾಳಿ ನಡೆಸಿ ಕ್ರೈಸ್ತರನ್ನು ಕೈದಿಯನ್ನಾಗಿಸಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಹಿಂದು, ಕ್ರೈಸ್ತ ವಿರೋಧಿಯಾಗಿದ್ದ ಎಂದರು. [ಇನ್ನು ಮುಂದೆ ಪ್ರತಿ ವರ್ಷ ಟಿಪ್ಪು ಜಯಂತಿ, ನವೆಂಬರ್ 10 ದಿನ ನಿಗದಿ]

Tippu

ರಾಜ್ಯ ಸರಕಾರ ತೀವ್ರ ವಿರೋಧದ ನಡುವೆಯೂ ಆಚರಣೆ ನಡೆಸಲು ತೀರ್ಮಾನ ಕೈಗೊಂಡರೆ ನವೆಂಬರ್ 1ರಿಂದ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆ.

ಹಾಗೂ ಈ ವಿಷಯದ ಕುರಿತು ಇದೇ 17ರಂದು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಟಿಪ್ಪು ಆಡಳಿತದ ಕುರಿತು ಚರ್ಚಾಗೋಷ್ಟಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The celebration of Tipu Sultan’s birthday on November 10 by the state government has been revolted against by the Dakshina Kannada wing of Tipu Jayanthi Virodha Horata Samithi. The convener of the samithi said that Tipu was an anti-Kannada despot and there is no meaning in celebrating his birthday.
Please Wait while comments are loading...