ಮಂಗಳೂರು : ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿ ಪೂರ್ಣ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 21 : 'ತುಂಬೆ ನೂತನ ವೆಂಟೆಡ್ ಡ್ಯಾಂ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಪ್ರಥಮ ಹಂತದಲ್ಲಿ ಎಷ್ಟು ನೀರು ಶೇಖರಿಸುವುದು? ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಹೇಳಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರಿನಾಥ್ ಅವರು, 'ಪ್ರಥಮ ಹಂತದಲ್ಲಿ 5 ಮೀಟರ್ ನೀರು ಶೇಖರಿಸಿದರೆ ಸುಮಾರು 140 ಎಕರೆ ಪ್ರದೇಶ ಮುಳುಗಡೆಯಾಗುತ್ತದೆ' ಎಂದರು.[ತುಂಬೆ ಡ್ಯಾಂ ಮುಳುಗಡೆ ಪ್ರದೇಶದ ಸಮೀಕ್ಷೆ]

Thumbe new vented dam construction work completed

ನೂತನ ಡ್ಯಾಂನಲ್ಲಿ 7ಮೀ ವರೆಗೆ ನೀರು ಸಂಗ್ರಹಿಸಲು ಅವಕಾಶವಿದ್ದು, ಇದರಿಂದ ಮುಳುಗಡೆಯಾಗುವ ಪ್ರದೇಶದ ಭೂಸ್ವಾಧೀನದ ಸಮೀಕ್ಷೆಗೆ ಸರ್ಕಾರ ಈಗಾಗಲೇ ಆದೇಶ ನೀಡಿದೆ. ಹಂತ-ಹಂತವಾಗಿ ಮುಳುಗಡೆ ಪ್ರದೇಶ ಭೂಸ್ವಾಧೀನ ಕಾರ್ಯ ನಡೆಯಲಿದೆ. ಸೂಕ್ತ ಪರಿಹಾರ ನೀಡುವಂತೆಯೂ ಸರ್ಕಾರದಿಂದ ಆದೇಶವಾಗಿದೆ.[ನೇತ್ರಾವತಿ ನದಿಗೆ ಕಾವಲು!]

ನೂತನ ವೆಂಟೆಡ್ ಡ್ಯಾಂ ನಿರ್ಮಾಣದರಿಂದ ಮುಳುಗಡೆಯಾಗುವ ಪ್ರದೇಶದ ಬಗ್ಗೆ ಹಲವಾರು ಅಂಕಿಗಳಿವೆ. ಇದರಿಂದಾಗಿ ಜನರು ಸಹ ಗೊಂದಲಕ್ಕೆ ಈಡಾಗಿದ್ದಾರೆ. 2004 ರಲ್ಲಿ 1083 ಎಕರೆ ಮುಳುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. 2009ರಲ್ಲಿ 216 ಎಕರೆ ಎಂದು ಹೇಳಲಾಗಿತ್ತು. 2013ರ ಜೂನ್‌ನಲ್ಲಿ 358 ಎಕರೆ ಎಂದು ಹೇಳಿದ್ದು ಗೊಂದಲಕ್ಕೆ ಕಾರಣವಾಗಿದೆ.

ತುಂಬೆ ಡ್ಯಾಂ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಮೂಲವಾಗಿದೆ. ಈ ವರ್ಷದ ಬರಗಾಲದ ಬಿಸಿ ತುಂಬೆ ಡ್ಯಾಂಗೂ ತಟ್ಟಿತ್ತು. 13 ವರ್ಷಗಳಲ್ಲೇ ಅಂತ್ಯತ ಕನಿಷ್ಠ ಮಟ್ಟಕ್ಕೆ ನೀರಿನ ಮಟ್ಟ ಕುಸಿದಿತ್ತು.

2009ರಲ್ಲಿ ಕರ್ನಾಟಕ ಸರ್ಕಾರ ನೂತನ ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿ ಆರಂಭಿಸಿತ್ತು. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು, ಈಗ ಪೂರ್ಣಗೊಳ್ಳುತ್ತಿದೆ. ನೂತನ ಡ್ಯಾಂ ಕಾಮಗಾರಿಗೆ ಮೊದಲು 20 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಯೋಜನಾ ವೆಚ್ಚ 60 ಕೋಟಿಗೂ ಹೆಚ್ಚಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New vented dam construction work completed at Mangaluru. Karnataka government has ordered survey of land which will be submerged by storing water in the new vented dam built across the Netravathi at Thumbe.
Please Wait while comments are loading...