ಭಾಷೆ ಮತ್ತು ಸಾಹಿತ್ಯದಿಂದ ಅದ್ಭುತ ಸೃಷ್ಟಿ: ಜಯಂತ್ ಕಾಯ್ಕಿಣಿ

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 16: ಎಲ್ಲಾ ಕಲೆಯ ಮೂಲತತ್ವವೇ ಸಾಹಿತ್ಯ, ಅಭಿವ್ಯಕ್ತಿಯ ಹಾದಿಯನ್ನು ತೋರಿಸಿಕೊಟ್ಟ ಸಾಹಿತ್ಯವನ್ನು ನಾವೆಂದೂ ಮರೆಯಬಾರದು ಎಂದು ಖ್ಯಾತ ಕವಿ ಜಯಂತ್ ಕಾಯ್ಕಿಣಿ ಅಭಿಪ್ರಾಯ ಪಟ್ಟರು.

ಮಂಗಳೂರಿನ ನಿಟ್ಟೆ ಸಂಸ್ಥೆ ಆಯೋಜಿಸಿದ್ದ ಬೆಕನ್ಸ್ 2ಕೆ 17 ಎಂಬ ಎರಡುದಿನಗಳ ರಾಷ್ಟ್ರೀಯ ಮಾಧ್ಯಮ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವನೆಂದು... ಹಾಡಿನ ನಂತರ ಕನ್ನಡ ಚಿತ್ರರಂಗದ ಅನಭಿಷಿಕ್ತ ಚಿತ್ರಸಾಹಿತಿಯಾಗಿ ಖ್ಯಾತಿ ಪಡೆದ ಕಾಯ್ಕಿಣಿ ಅವರು ಬರೆದ ಎಲ್ಲಾ ಹಾಡುಗಳೂ ಅರ್ಥ ಗರ್ಭಿತವೇ. ಕನ್ನಡ ಚಿತ್ರ ಸಾಹಿತ್ಯ ಇಂಗ್ಲಿಶ್ ಪದಗಳಿಂದಲೇ ತುಂಬಿ ತುಳುಕುತ್ತ, ಕನ್ನಡ ಭಾಷೆಗೆ ದಾರಿದ್ರ್ಯ ಬಂದುಬಿಟ್ಟಿದೆಯೇನೋ ಎಂದು ಕನ್ನಡ ಪ್ರೇಮಿಗಳು ತಲೆಕೆಡಿಸಿಕೊಂಡಾಗ ಚಿತ್ರಸಾಹಿತಿಯಾಗಿ ಬಂದವರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾದ ಜಯಂತ್ ಕಾಯ್ಕಿಣಿ.[ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಮೇಲೆ ದಾಳಿಗೆ ಯತ್ನ?]

ಮಂಗಳೂರಿನ ನಿಟ್ಟೆ ಸಂಸ್ಥೆ ಆಯೋಜಿಸಿದ್ದ ಮಾಧ್ಯಮ ಹಬ್ಬದಲ್ಲಿ ಮಳೆ ಕವಿ ಏನೆಲ್ಲಾ ಮಾತನಾಡಿದರು ಎಂಬುದನ್ನು ತಿಳಿಯಬೇಕೆ? ಮುಂದೆ ಓದಿ...

ಬಹುಭಾಷಾ ಸಂವೇದನೆ ಭಾರತದ ತಿರುಳು

ಬಹುಭಾಷಾ ಸಂವೇದನೆ ಭಾರತದ ತಿರುಳು

"ಬಹು ಭಾಷಾ ಸಂವೇದನೆ ಭಾರತದ ತಿರುಳಷ್ಟೇ ಅಲ್ಲ, ಅದು ನಮ್ಮ ವ್ಯಕ್ತಿತ್ವದ ಮೂಲತತ್ವವೂ ಆಗಿದೆ. ಸಾಹಿತ್ಯದ ಸರಿಯಾದ ಬಳಕೆಯಿಂದ ಒಬ್ಬ ವ್ಯಕ್ತಿ ಅದ್ಭುತವನ್ನೇ ಸೃಷ್ಟಿಸಬಹುದು, ಅನ್ವೇಷಿಸಲಾಗದ್ದನ್ನೂ ಅನ್ವೇಷಿಸಬಹುದು"- ಕವಿ ಜಯಂತ್ ಕಾಯ್ಕಿಣಿ.

ಸಾಮಾಜಿಕ ಮಾಧ್ಯಮದ ಅಂಕೆಯಲ್ಲಿ ನಾವು

ಸಾಮಾಜಿಕ ಮಾಧ್ಯಮದ ಅಂಕೆಯಲ್ಲಿ ನಾವು

"ಇಂದು ಸಾಮಾಜಿಕ ಮಾಧ್ಯಮಗಳ ಬಳಕೆ ಅತಿಯಾಗುತ್ತಿದೆ. ಜನರು ತಾವೊಂದು ಮೆಸೇಜ್ ಕಳಿಸುವ ಮೂಲಕ ಏನನ್ನೋ ಸಾಧಿಸಿಬಿಟ್ಟಿದ್ದೇವೆ ಎಂದುಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಸಮಸ್ಯೆಯೂ ಹತ್ತಿರದಿಂದ ನೋಡಿ, ಅನುಭವಕ್ಕೆ ಬರದೆ ಅರ್ಥವಾಗುವುದಿಲ್ಲ. ಸಾಮಾಜಿಕ ಮಾಧ್ಯಮಗಳು ನಮ್ಮನ್ನೇ ತಮ್ಮ ಅಂಕೆಯಲ್ಲಿಟ್ಟುಗೊಳ್ಳುವಂಥ ಸನ್ನಿವೇಶವನ್ನು ನಾವು ಸೃಷ್ಟಿಸಬಾರದು" ಜಯಂತ್ ಕಾಯ್ಕಿಣಿ

ಸಾಮಾಜಿಕ ಮಾಧ್ಯಮದಿಂದ ಹೊರಬನ್ನಿ

ಸಾಮಾಜಿಕ ಮಾಧ್ಯಮದಿಂದ ಹೊರಬನ್ನಿ

"ಸಾಮಾಜಿಕ ಮಾಧ್ಯಮದ ಭ್ರಮೆಯಿಂದ ಹೊರಬಂದು ನೀವೇ ಸಮಾಜವಾಗುವುದಕ್ಕೆ ಪ್ರಯತ್ನಿಸಿ" - ಜಯಂತ್ ಕಾಯ್ಕಿಣಿ

ಪರಿಣಾಮಕಾರೀ ಕಲಾಪ್ರಕಾರವಾಗಿ ಸಿನೆಮಾ

ಪರಿಣಾಮಕಾರೀ ಕಲಾಪ್ರಕಾರವಾಗಿ ಸಿನೆಮಾ

"ಹಲವಾರು ಕಲಾಪ್ರಕಾರಗಳಲ್ಲಿ ಸಿನೆಮಾಕ್ಕೆ ತನ್ನದೇ ಆದ ಜವಾಬ್ದಾರಿ ಮತ್ತು ಮೌಲ್ಯವಿದೆ. ಇಡೀ ಜಗತ್ತನ್ನು ಒಬ್ಬರ ಕಣ್ಣಳತೆಯಲ್ಲಿ ಬಿಂಬಿಸಬಲ್ಲ ಸಿನೆಮಾ ಒಂದು ಪರಿಣಾಮಕಾರೀ ಕಲಾಪ್ರಕಾರ." - ಜಯಂತ್ ಕಾಯ್ಕಿಣಿ

ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ

ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ

ಎರಡುದಿನಗಳ ಈ ಮಾಧ್ಯಮ ಹಬ್ಬ ವಿವಿಧ ಸ್ಪರ್ಧೆಗಳು, ಮರಂಜನೆಗಳೊಂದಿಗೆ ಸುಸಂಪನ್ನಗೊಂಡಿತು. ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆಯಾಯಿತು.

ಎಸ್ ಡಿ ಎಂ ವಿರಾಗ್ರಣಿ

ಎಸ್ ಡಿ ಎಂ ವಿರಾಗ್ರಣಿ

ಹಲವು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಗಳಿಸಿದ ಉಜಿರೆಯ ಎಸ್ ಡಿ ಎಂ ಕಾಲೇಜ್ ವಿರಾಗ್ರಣಿಗೆ ಭಾಜನವಾದರೆ, ವಿವೇಕಾನಂದ ಕಾಲೇಜು ಪುತ್ತೂರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Never forget the literature which shows you the way to express your opinions veteran Kannada Poet Jayant Kaykini told. He was delivering a key note address during the valedictory ceremony of Beacons 2K17, two day national level media fest organised by Nitte Institute of Communication recently.
Please Wait while comments are loading...