ಮಂಗಳೂರು: ವಿದ್ಯುತ್ ಅವಘಡ, ಮೂರು ಮಂದಿ ದಾರುಣ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 29: ವಿದ್ಯುತ್ ಅವಘಡದಿಂದಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ನಗರದ ಬಿಜೈ ಸಮೀಪದ ಉಜ್ಜೋಡಿಯಲ್ಲಿ ನಡೆದಿದೆ.

Three lost life in Electric accident

ಉಜ್ಜೋಡಿಯ ವಲೇರಿಯನ್ ಲೋಬೊ(55) ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ(51) ಮತ್ತು ಮೂಡುಬಿದಿರೆಯ ಸಂದೀಪ್(28) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.[ಅರಣ್ಯದಲ್ಲಿ ಅಕ್ರಮ ಕಸಾಯಿಖಾನೆ: ಇಬ್ಬರ ಬಂಧನ]

Three lost life in Electric accident

ವಲೇರಿಯನ್ ಲೋಬೊರ ಮನೆ ಅಂಗಳದ ತೆಂಗಿನ ಮರಕ್ಕೆ ಏಣಿ ಇಟ್ಟು ಕಾಳು ಮೆಣಸು ತೆಗೆಯಲು ಸಂದೀಪ್ ಹತ್ತಿದ್ದರು. ಈ ವೇಳೆ ಸಂದೀಪ್ , ಏಣಿ ಸಮೇತ ಆಯತಪ್ಪಿ ವಿದ್ಯುತ್ ತಂತಿಯ ಮೇಲೆ ಬಿದ್ದರು. ಆಗ ವಿದ್ಯುತ್ ಆಘಾತಕ್ಕೊಳಗಾದ ಅವರನ್ನು ರಕ್ಷಿಸಲು ಧಾವಿಸಿದ ಪತಿ ವಲೇರಿಯನ್ ಮತ್ತು ಪತ್ನಿ ಹೆಸ್ಮಿ ಕೂಡ ವಿದ್ಯುತ್ ಅವಘಡಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ.[ಮಂಗಳೂರು: ಗಂಡ-ಹೆಂಡತಿ ಆತ್ಮಹತ್ಯೆ ಯತ್ನ, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three people died in an electrical accident in Ujjodi near Bijai, Mangaluru.
Please Wait while comments are loading...