ಮಂಗಳೂರು ಕಾರಾಗೃಹಕ್ಕೆ‌ ಗಾಂಜಾ ಪೂರೈಕೆ ಯತ್ನ, ಮೂವರ ಬಂಧನ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 27: ಮಂಗಳೂರು‌‌ ಜಿಲ್ಲಾ ಕಾರಾಗೃಹಕ್ಕೆ‌ ಗಾಂಜಾ ಪೂರೈಕೆ ಮಾಡಲು ಯತ್ನಿಸುತಿದ್ದ 3 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಜೈಲು ಮೇಲೆ ಸಿಸಿಬಿ ದಾಳಿ

ಬಂಧಿತರನ್ನು ಅಶೋಕ ನಗರ‌ ಗುರುಂಪೆ‌ ನಿವಾಸಿ ರಿತೇಶ್ (21), ಪುತ್ತೂರು ಕೆಮ್ಮಿಂಜೆ‌ ನಿವಾಸಿ ರವಿ ಪೂಜಾರಿ (23), ಕುಂಜತ್ತೂರು‌ ನಿವಾಸಿ ರಾಜೇಶ್ (29) ಎಂದು ಗುರ‍ುತಿಸಲಾಗಿದೆ.

Three held for trying to supply ganja to Mangaluru Jail

ಬಂಧಿತರು ಜೈಲಿನ ಹೊರಬದಿಯಿಂದ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಜೈಲಿನ ಗೋಡೆಯ ಮೂಲಕ ಬಿಸಾಕಿ ಗಾಂಜಾ ಪೂರೈಕೆಗೆ‌ ಸ್ಕೆಚ್ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಗಾಂಜಾ ಹಿಡಿದುಕೊಂಡು ಹೊರಗೆ ಅಂಗಡಿಯೊಂದರ ಬಳಿ‌ ನಿಂತಿದ್ದ ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕದ್ರಿ ಠಾಣಾ ಪೊಲೀಸರು ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 3500ರೂ. ಮೌಲ್ಯದ 250 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಈ‌ ಹಿಂದೆ ಜೈಲುವಾಸಿಗಳಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kadri station led by police inspector, Maruti G Nayak, arrested a team of three persons who were trying to carry ganja into the district prison.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X