ಸಿಲಿಂಡರ್ ಸ್ಫೋಟ, ಪಟಾಕಿ ಸಿಡಿತ : ಬೆಡಿ ಸಾಯೇಬನ ಮನೆ ಧ್ವಂಸ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ, 13: ಮೂರು ಗ್ಯಾಸ್ ಸಿಲಿಂಡರ್, ಪಟಾಕಿಗಳು ಮಂಗಳೂರಿನ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳದಲ್ಲಿ ಸ್ಫೋಟಗೊಂಡ ಪರಿಣಾಮ ಮನೆ ಭಾಗಶಃ ಸುಟ್ಟುಹೋಗಿದ್ದು, ಮನೆಯೊಡತಿಗೆ ಗಂಭೀರ ಗಾಯಗಳಾಗಿವೆ.

ಬೆಡಿ ಸಾಯೇಬ ಎಂಬುವರ ಮನೆಯಲ್ಲಿ ಈ ಸ್ಪೋಟ ಸಂಭವಿಸಿದೆ. ಘಟನೆಯಿಂದ ಮನೆಯ ಛಾವಣಿ ನೆಲಕ್ಕುರುಳಿದ್ದು, ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಮನೆಯೊಳಗೆ ಗಾಯಗೊಂಡಿದ್ದ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.[ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ]

Three gas cylinder explosion in Mangaluru

ಬೆಡಿ ಸಾಯೇಬ ಅವರು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ಇದ್ದಕ್ಕಿದ್ದಂತೆ ಮೂರು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿವೆ. ಬಳಿಕ ಮನೆಯ ಮತ್ತೊಂದು ಕೋಣೆಯಲ್ಲಿ ಪೇರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ತಗುಲಿದ್ದು, ಅವಘಡದ ತೀವ್ರತೆ ಹೆಚ್ಚಾಗುವುದಕ್ಕೆ ಮೂಲ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.[10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಸ್ಫೋಟದ ತೀವ್ರತೆಗೆ ಊರಿನ ಜನ ಕಂಗಾಲಾಗಿದ್ದಾರೆ. ಮನೆಯೊಳಗಡೆ ಇಟ್ಟಿದ್ದ ಪಾತ್ರೆಗಳು ಮೇಲಕ್ಕೆ ಚಿಮ್ಮಿ ಇನ್ನೆಲ್ಲೋ ತೂರಿ ಬಿದ್ದಿದ್ದವು. ಬೆಡಿ ಸಾಯೇಬಾ ಎಂದೇ ಪ್ರಸಿದ್ದರಾದ ಇವರ ಮನೆಯಲ್ಲಿ ಪಟಾಕಿಗಳಿದ್ದವು, ಇವುಗಳನ್ನು ಅವರು ಊರಲ್ಲಿ ನಡೆಯುವ ಸಮಾರಂಭಕ್ಕೆ ಪೂರೈಸುತ್ತಿದ್ದರು ಎಂದು ತಿಳಿದು ಬಂದಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three gas cylinder explosion Bedi Sayeba's house at Adkabaare kolakambla, Bajpe, Mangaluru on Tuesday, 13th. Family owner hospitalized.
Please Wait while comments are loading...