ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷ ಪ್ರಸಾದ ದುರಂತ: ಮಾನವೀಯತೆ ಮೆರೆದ ಆಳ್ವಾಸ್

|
Google Oneindia Kannada News

ಮಂಗಳೂರು, ಡಿಸೆಂಬರ್ 19: ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಸಾವನ್ನಪ್ಪಿದ್ದ ಕೃಷ್ಣನಾಯ್ಕ್ -ಮೈಲಿಬಾಯಿ ದಂಪತಿಯ ಮನೆಗೆ ಮಂಗಳವಾರ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಕುರಿಯನ್ ಮತ್ತು ತಂಡ ಭೇಟಿ ನೀಡಿ 1 ಲಕ್ಷ ರೂಪಾಯಿ ಹಣ ನೀಡಿದ್ದಾರೆ.

ಈ ಘೋರ ದುರಂತದಲ್ಲಿ ಮೃತಪಟ್ಟ ಕೃಷ್ಣನಾಯ್ಕ್ -ಮೈಲಿಬಾಯಿ ದಂಪತಿಯ ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರುವ ತನಕ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಜವಬ್ದಾರಿಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರು ಹೊತ್ತುಕೊಂಡಿದ್ದು, ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈ ಮಾನವೀಯ ಕೊಡುಗೆಯನ್ನು ಮಕ್ಕಳು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

'ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ': ತಪ್ಪೊಪ್ಪಿಕೊಂಡ ಅರ್ಚಕ ದೊಡ್ಡಯ್ಯ?'ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ': ತಪ್ಪೊಪ್ಪಿಕೊಂಡ ಅರ್ಚಕ ದೊಡ್ಡಯ್ಯ?

ದುರಂತದಲ್ಲಿ ಮೃತಪಟ್ಟ ದಂಪತಿಯ ಹಿರಿಯ ಮಗಳು ರಾಣಿಬಾಯಿ ಬಿಎಸ್ಸಿ , ಎರಡನೇ ಮಗಳು ಪ್ರಿಯಾಬಾಯಿ ಬಿಎಸ್ ಸಿ ನರ್ಸಿಂಗ್‌ ಹಾಗೂ ಮಗ ರಾಜೇಶ್‌ ನಾಯ್ಕ್ ಅವರ ಪಿಯುಸಿ ವ್ಯಾಸಂಗವನ್ನು ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದಲ್ಲಿ ಉಚಿತವಾಗಿ ನೀಡುವ ಬಗ್ಗೆ ಮನವರಿಕೆ ಮಾಡಿದ್ದು ಅದಕ್ಕೆ ಅವರೂ ಸಮ್ಮತಿ ಸೂಚಿಸಿದ್ದಾರೆ.

Three children agrees for Alvas Institutions Adoption

ವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆ

ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಯತಿಕುಮಾರ್ ಸ್ವಾಮಿ ಗೌಡ , ಕಾಮರ್ಸ್ ಡೀನ್ ಪ್ರಶಾಂತ್ ಹಾಗೂ ಉಪನ್ಯಾಸಕ ಅಂಬರೀಶ್ ಅವರು ನಿಯೋಗ ಕೃಷ್ಣನಾಯ್ಕ್-ಮೈಲಿಬಾಯಿ ದಂಪತಿಯ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿದರು.

English summary
Three children one who lost their parents in Sulwadi temple tragedy agreed for Alvas institution's adoption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X