ಶರತ್ ಹತ್ಯೆ ತನಿಖೆಯನ್ನು ಎನ್ಐಎಗೆ ಒಪ್ಪಿಸುವ ಅಗತ್ಯವಿಲ್ಲ

Posted By:
Subscribe to Oneindia Kannada

ಮಂಗಳೂರು, ಜುಲೈ 17: ಶರತ್ ಮಡಿವಾಳ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವ ಅಗತ್ಯವಿಲ್ಲ ಎಂದು ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಇಂದು ಮಂಗಳೂರು ಕೋರ್ಟ್ ಗೆ ಹಾಜರಾಗುವ ಸಂದರ್ಭ ಮಾಧ್ಯಮ ಪ್ರತಿನಿದಿಗಳ ಜೊತೆಗೆ ಮಾತನಾಡಿದ ಅವರು, "ಶರತ್ ಮಡಿವಾಳ ಹತ್ಯೆಯ ತನಿಖೆಯನ್ನು ಎನ್ಐಎಗೆ ಒಪ್ಪಿಸುವ ಅಗತ್ಯ ಇಲ್ಲ. ನಮ್ಮ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ," ಎಂದರು.

There is no need to hand over the Sharath Madiwala murder case to NIA - Pramod Muthalik

"ಕರಾವಳಿ ಜಿಲ್ಲೆಯಲ್ಲಿ ಭಯದ ವಾತಾವರಣ ಇಲ್ಲ. ದೊಂಬಿಯಾಗುತ್ತಿದೆ ಅಂತಾ ವಿನಾಕಾರಣ ಬಿಂಬಿಸಲಾಗುತ್ತಿದೆ ಹೊರತು ಜಿಲ್ಲೆಯಲ್ಲಿ ಯಾವುದೇ ರೀತಿಯ ಭಯದ ವಾತಾವರಣ ಕಾಣುತ್ತಿಲ್ಲ," ಎಂದರು.

Iftar Get Together, Udupi : Swamiji requests Muthalik to maintain peace | Oneindia kannada

"ಸಿಎಂ ಪೋಲೀಸರ ಮೇಲೆ ಒತ್ತಡ ಹೇರುವಂತಿಲ್ಲ. ಹಿಂದು ಮುಖಂಡರ ಬಂಧನಕ್ಕೆ ಸಿಎಂ ಆದೇಶ ಕೂಡುವ ಅಗತ್ಯವಿಲ್ಲ. ಅಗತ್ಯ ಬಿದ್ದರೆ ಕರಾವಳಿಯ ಪೊಲೀಸರೇ ಬಂಧಿಸುತ್ತಾರೆ," ಎಂದೂ ಅವರು ಅಭಿಪ್ರಾಯಪಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
“There is no need to hand over the investigation of Sharath Madiwala murder to NIA,” said Sri Ram Sena founder Pramod Muthalik here in Mangaluru when arrived to court hearing on July 17.
Please Wait while comments are loading...