ಶ್ರೀರಾಮನ ಅಸ್ತಿತ್ವದ ಬಗ್ಗೆ ಸ್ಪಷ್ಟತೆಯೂ ಇಲ್ಲ, ಪುರಾವೆಯೂ ಇಲ್ಲ: ದ್ವಾರಕನಾಥ್

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 5: ಶ್ರೀರಾಮನ ಅಸ್ತಿತ್ವದ ಬಗ್ಗೆ ಮತ್ತೆ ಪ್ರಶ್ನೆ ಮಾಡಿದ್ದಾರೆ. ಈ ಬಾರಿ ಪ್ರೊ.ಕೆ.ಎಸ್.ಭಗವಾನ್ ಅವರಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕ ನಾಥ್ ಪ್ರಶ್ನೆ ಎತ್ತಿದ್ದಾರೆ.

ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ಇತಿಹಾಸದಲ್ಲಿ ಮೂವರು ಮಹಾತ್ಮರ ಸೃಷ್ಟಿಗೆ ದಾಖಲೆ ಮತ್ತು ಪುರಾವೆಗಳಿವೆ. ಆದರೆ ಶ್ರೀರಾಮ ಹುಟ್ಟಿದ್ದ ಎಂಬುದಕ್ಕೆ ಪುರಾವೆಗಳೇ ಇಲ್ಲ ಎಂದು ದ್ವಾರಕ ನಾಥ್ ಅಭಿಪ್ರಾಯ ಪಟ್ಟರು. ಮಂಗಳವಾರ ಬಾಬರಿ ಮಸೀದಿ ಧ್ವಂಸದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ರಾಮನು ದೇವರಾ ಎಂದು ಪ್ರಶ್ನಿಸುವ ಪ್ರೊ ಕೆಎಸ್ ಭಗವಾನ್ ಸಂದರ್ಶನ

ಮಂಗಳೂರಿನ ಪುರಭವನದಲ್ಲಿ ಎಸ್ ಡಿಪಿಐನಿಂದ 'ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ' ವಿಷಯದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ದ್ವಾರಕ ನಾಥ್, ಶ್ರೀರಾಮನ ಜನ್ಮದ ಕುರಿತು ಸರಿಯಾದ ಸ್ಪಷ್ಟತೆಯಿಲ್ಲ, ಪುರಾವೆ ಅಂತೂ ಇಲ್ಲವೇ ಇಲ್ಲ ಎಂದು ಹೇಳಿದರು.

Sri Rama

ಇತಿಹಾಸದಲ್ಲಿ ಮೂವರು ಮಹಾತ್ಮರ ಸೃಷ್ಟಿಗೆ ದಾಖಲೆ ಮತ್ತು ಪುರಾವೆಗಳಿವೆ. ದಾಖಲಾತಿಗಳ ಪ್ರಕಾರ ಬುದ್ಧ, ಕ್ರಿಸ್ತ, ಪೈಗಂಬರ್ ಅವರ ಅಸ್ತಿತ್ವಕ್ಕೆ ಪುರಾವೆಯಿವೆ. ಆದರೆ ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ಅಸ್ತಿತ್ವವೇ ಇಲ್ಲದ ವ್ಯಕ್ತಿಯ ಬಗ್ಗೆ ಏನು ಹೇಳಬೇಕು ಎಂದು ಅರ್ಥವಾಗುತ್ತಿಲ್ಲ ಎಂದರು.

Dwarakanath

ಬುದ್ಧ, ಕ್ರಿಸ್ತ, ಪೈಗಂಬರ್ ಇವರನ್ನು ಹೊರತುಪಡಿಸಿ ಇನ್ಯಾವ ಮಹಾತ್ಮರ ದಾಖಲಾತಿಗಳು ಸಿಕ್ಕಿಲ್ಲ. ಅಸ್ತಿತ್ವದಲ್ಲಿ ಇರದ ವ್ಯಕ್ತಿಯ ಬಗ್ಗೆ ಯಾವ ರೀತಿಯಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಾ ಹೋಗುತ್ತಿದ್ದಾರೆ ಎಂಬುದು ಆಶ್ಚರ್ಯಕರ ವಿಷಯ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is no clarity about Srirama's existence, Former chairman of the State Backward Classes Commission Dwaraka Nath in Mangaluru on Tuesday. He spokes in a seminar conducted by SDPI.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ