ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಸ್ಥಾನಿ ಐಟಮ್ಸ್ ಬೇಕಿದ್ದಲ್ಲಿ ಮಂಗ್ಳೂರಿಗೆ ಭೇಟಿ ಕೊಡಿ

By Vanitha
|
Google Oneindia Kannada News

ಮಂಗಳೂರು,ಜನವರಿ,08: ರಾಜಸ್ಥಾನವೂ ಆಭರಣ, ವಸ್ತ್ರವಿನ್ಯಾಸ, ಕಲಾನ್ಮಕತೆ, ನೃತ್ಯ ಹೀಗೆ ಪ್ರತಿಯೊಂದು ಅಂಶದಲ್ಲೂ ತನ್ನದೇ ಆದ ವಿಶೇಷ ಶೈಲಿಯನ್ನು ಇಂದಿಗೂ ಅನುಸರಿಸಿಕೊಂಡು ಬರುತ್ತಿದೆ. ಈ ಎಲ್ಲಾ ಅಂಶಗಳನ್ನು ನೋಡಲು, ಕೊಳ್ಳಲು ಮಂಗಳೂರು ಜಿಲ್ಲೆಯು ನಿಮಗೊಂದು ವೇದಿಕೆ ಕಲ್ಪಿಸಿಕೊಟ್ಟಿದೆ.

ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ 'ರಾಜಸ್ಥಾನ್ ಗ್ರಾಮೀಣ ಮೇಳ' ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಸ್ತೆಯ ಹೋಟೆಲ್ ವುಡ್ ಲ್ಯಾಂಡ್ ನಲ್ಲಿ ಇಂದಿನಿಂದ ಆರಂಭಗೊಂಡಿದ್ದು, ಜನವರಿ 25ರವರೆಗೂ ನಿಮ್ಮ ಆಸಕ್ತಿಯ ವಸ್ತು, ವಸ್ತ್ರಗಳನ್ನು ಕೊಳ್ಳಲು ಮುಕ್ತ ಆಹ್ವಾನವಿದೆ.

'ರಾಜಸ್ಥಾನ್ ಗ್ರಾಮೀಣ ಮೇಳ'ವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿ ಖಾದರ್ ಷಾ ಉದ್ಘಾಟಿಸಿದ್ದು, ಮೇಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ "ರಾಜಸ್ಥಾನ್ ಗ್ರಾಮೀಣ ಮೇಳ"ದ ಸಂಘಟಕ ದಿನೇಶ್ ಶರ್ಮಾ ಅವರು ಮೇಳದ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ವಿ.ಬಿ ಶುಕ್ಲಾ, ಮೊಹಮ್ಮದ್ ಸಲ್ಮಾನ್, ದಿಲ್ ಕುಶ್ ಕುಮಾರ್, ಅಲಿಂ ಅನ್ಸಾರಿ, ಬರೂನ್ ಕುಮಾರ್ ಝಾ ಮುಂತಾದವರು ಉಪಸ್ಥಿತರಿದ್ದರು.[ಜಲ್ಲಿಕಟ್ಟು ನಿಷೇಧ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ]

ನೀವು ರಾಜಸ್ಥಾನ ವಸ್ತುಗಳ ಪ್ರಿಯರೇ, ಹಾಗಾದರೆ ಬನ್ನಿ, ಅಲ್ಲಿ ಏನೆಲ್ಲಾ ವಿಶೇಷತೆಗಳಿವೆ, ಯಾವ ಯಾವ ರೀತಿಯ ವಸ್ತಗಳು ಲಭ್ಯವಿದೆ ಎಂದು ಒಂದು ಸುತ್ತು ನೋಡಿಕೊಂಡು ಬರೋಣ.

ಮನಸ್ಸನ್ನು ಸೆಳೆಯುವ ಗೊಂಬೆಗಳು

ಮನಸ್ಸನ್ನು ಸೆಳೆಯುವ ಗೊಂಬೆಗಳು

ಈ ಮೇಳದಲ್ಲಿರುವ ಗೊಂಬೆಗಳನ್ನು ನೋಡಿದರೆ ಕೇವಲ ಸಣ್ಣ ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ ಒಮ್ಮೆ ಆಕರ್ಷಿತರಾಗುತ್ತಾರೆ. ಅಷ್ಟೊಂದು ಸುಂದರವಾಗಿವೆ ಇಲ್ಲಿನ ಗೊಂಬೆಗಳು, ಇವು ಮನೆಯ ಅಂದವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ಕಲಾತ್ಮಕತೆ ಬಿಂಬಿಸುವ ಹೂ ಕುಂಡಗಳು

ಕಲಾತ್ಮಕತೆ ಬಿಂಬಿಸುವ ಹೂ ಕುಂಡಗಳು

ನಾನಾ ಬಣ್ಣದ ಹೂಕುಂಡಗಳು ಇಲ್ಲಿ ದೊರೆಯಲಿದ್ದು, ರಾಜಸ್ಥಾನಿಯ ಕಲಾತ್ಮಕತೆಯೇ ಮೇವೆತ್ತಿದೆ. ನೋಡುಗರನ್ನು ಕೊಂಡು ಹೋಗುವಂತೆಯೇ ಮಾಡುತ್ತದೆ. ಅಷ್ಟೊಂದು ಸುಂದರವಾಗಿವೆ ಹೂ ಕುಂಡಗಳು.

ಶ್ವೇತ ವರ್ಣದ ದೇವರುಗಳು, ಡೈನಿಂಗ್ ಟೇಬಲ್ ವಸ್ತುಗಳು

ಶ್ವೇತ ವರ್ಣದ ದೇವರುಗಳು, ಡೈನಿಂಗ್ ಟೇಬಲ್ ವಸ್ತುಗಳು

ಶ್ವೇತವರ್ಣದ ಬುದ್ದ, ಪಾರ್ಶ್ವನಾಥ, ಮಹಾವೀರ, ಕಂದು ಬಣ್ಣದ ಹ್ಯಾಪಿ ಮ್ಯಾನ್, ಗಣಪತಿ, ಚಾಮುಂಡೇಶ್ವರಿ ವಿಗ್ರಹ, ಸಣ್ಣ ಪುಟ್ಟ ತಟ್ಟೆಗಳು ಇನ್ನಿತರ ವಸ್ತಗಳು ಲಭ್ಯವಿದೆ. ನಿಮ್ಮ ಇಷ್ಟದ ದೇವರ ವಿಗ್ರಹಗಳು ಕೊಂಡುಕೊಳ್ಳಬಹುದು

ಕಂಚಿನ ವಿಗ್ರಹಗಳು

ಕಂಚಿನ ವಿಗ್ರಹಗಳು

ಜೋದ್ ಪುರ ಮರದ ಕರಕುಶಲದ ಪಿಠೋಪಕರಣಗಳು, ಸಾರಂಗ್ಪುರ್ ಮರದ ಪಿಠೋಪಕರಣಗಳು, ಹೈದರಾಬಾದ್ ಕಪ್ಪು ಮೇಟಲ್ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳಿವೆ.ಬಿದ್ದರೂ ಒಡೆಯದ, ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಬೃಹದಾಕಾರದ ಕಂಚಿನ ವಿಗ್ರಹಗಳು ನಿಮಗೆ ಇಲ್ಲಿ ಸಿಗುತ್ತದೆ.

ಎಂಬ್ರೈಡರಿ ಬ್ಯಾಗ್ ಗಳು

ಎಂಬ್ರೈಡರಿ ಬ್ಯಾಗ್ ಗಳು

ನೀವು ಇಷ್ಟ ಪಡುವ ಎಂಬ್ರೈಡರಿ ವ್ಯಾನಿಟಿ ಬ್ಯಾಗ್ ಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ ಶೀಟ್ ಗಳು ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್ ಶೀಟ್ ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.

ಬಣ್ಣ, ಬಣ್ಣದ ರಾಜಸ್ತಾನಿ ಬಳೆಗಳ ಕಟ್ಟು

ಬಣ್ಣ, ಬಣ್ಣದ ರಾಜಸ್ತಾನಿ ಬಳೆಗಳ ಕಟ್ಟು

ವಿಶೇಷ ಶೈಲಿಯ ಜೈಪುರ್ ಆಭರಣಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ ಗಳು ಬೃಹತ್ ಸಂಗ್ರಹವಿದೆ. ಜೊತೆಗೆ ರಾಜಸ್ಥಾನಿ ಬಳೆಗಳು ಎಲ್ಲಾ ರೀತಿಯ ಬಳೆಗಳಿಗಿಂತ ವಿಭಿನ್ನವಾಗಿಯೇ ಇರುತ್ತದೆ. ಇದು ನಿಮಗೆ ಗೊತ್ತಿರುವ ವಿಚಾರ. ನೀವು ಇಷ್ಟಪಡುವ ವಿವಿಧ ಬಣ್ಣದ ಬಳೆಗಳು ಸಿಗುತ್ತವೆ.

ಮಕ್ಕಳು ಇಷ್ಟಪಡುವ ಆಟದ ಸಾಮಾನುಗಳು

ಮಕ್ಕಳು ಇಷ್ಟಪಡುವ ಆಟದ ಸಾಮಾನುಗಳು

ಉತ್ತಮ ಕ್ವಾಲಿಟಿಯ ಲೇಡಿಸ್ ಟಾಪ್ಸ್, ಮಕ್ಕಳು ಇಷ್ಟಪಡುವ ಆಟದ ಸಾಮಾನುಗಳು ಹೀಗೆ ಮಕ್ಕಳಿಂದ ಹಿಡಿದು ವಯೋವೃದ್ದರು ಇಷ್ಟಪಡುವ ಎಲ್ಲಾ ವಸ್ತುಗಳು ಇಲ್ಲಿ ಲಭ್ಯವಿದೆ.

ಅಂದದ ಕಾಫಿ ಕಪ್ ಗಳು

ಅಂದದ ಕಾಫಿ ಕಪ್ ಗಳು

ಮೇಳದಲ್ಲಿ ಸಿಗುವ ಕಾಫಿ, ಟೀ ಕಪ್ ಗಳುನ ರಾಜಸ್ತಾನಿ ಕಲಾ ವಿನ್ಯಾಸತೆ ಹೊಂದಿದ್ದು, ನಿಮ್ಮ ಮುಂಜಾನೆಯ ಸಮಯವನ್ನು ಸ್ವಾದಕರವನ್ನಾಗಿ ಮಾಡಲಿದೆ.

ವಿವಿಧ ಬಣ್ಣದ ಕಾಲ್ಗೆಜ್ಜೆಗಳು

ವಿವಿಧ ಬಣ್ಣದ ಕಾಲ್ಗೆಜ್ಜೆಗಳು

ನಾವು ಕೇವಲ ಬೆಳ್ಳಿಯ ಕಾಲುಗೆಜ್ಜೆಗಳು ಕಂಡು, ತೊಟ್ಟು ಅಭ್ಯಾಸವಾಗಿದ್ದರೆ, ಈ ಮೇಳಕ್ಕೆ ಹೋಗಿ ನಿಮ್ಮ ಡ್ರೆಸ್ ಗೆ ಮ್ಯಾಚ್ ಆಗುವ ಕಾಲುಗೆಜ್ಜೆ ಕೊಂಡು ತಂದು ಧರಿಸಿ ನೋಡಿ

ವೆರೈಟಿ ಸ್ಯಾಂಡಲ್ಸ್

ವೆರೈಟಿ ಸ್ಯಾಂಡಲ್ಸ್

ನಿಮ್ಮ ಕೋಮಲವಾದ ಕಾಲಿನ ಸುರಕ್ಷತೆಗಾಗಿ ರಾಜಸ್ತಾನಿ ಶೈಲಿಯ ಸ್ಯಾಂಡಲ್ಸ್ ಗಳು ಇಲ್ಲಿ ಸಿಗುತ್ತದೆ. ನಿಮ್ಮ ಇಷ್ಟ ಬಣ್ಣದ, ನವೀನ ಶೈಲಿಯ ಚಪ್ಪಲಿ ಕೊಂಡು ನಿಮ್ಮ ಪಾದಗಳ ಸುರಕ್ಷತೆ ಕಾಯ್ದುಕೊಳ್ಳಿ.

ವಿಭಿನ್ನ ರುಚಿಯ ರಾಜಸ್ಥಾನಿ ಆಹಾರ

ವಿಭಿನ್ನ ರುಚಿಯ ರಾಜಸ್ಥಾನಿ ಆಹಾರ

ಕರ್ನಾಟಕದ ಆಹಾರ ತಿಂದು ಬೇಸರವಾದಲ್ಲಿನ ರಾಜಸ್ತಾನದ ಕೆಲವು ತಿನಿಸುಗಳನ್ನು ಕೊಳ್ಳಲು, ನಿಮ್ಮ ಬಾಯಿ ರುಚಿ ತಣಿಸಕೊಳ್ಳಲು ಇಲ್ಲಿ ಅವಕಾಶವಿದೆ.

ನಿಮಗೆ ಇಷ್ಟವಾಗುವ ಕಾಟನ್ ಸೀರೆ, ಟಾಪ್ ಗಳು

ನಿಮಗೆ ಇಷ್ಟವಾಗುವ ಕಾಟನ್ ಸೀರೆ, ಟಾಪ್ ಗಳು

ನಾರಿಯರಿಗೆ ಎಂದು ಮೀಸಲಾದ ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು ಸುಂದರವಾದ ಟಾಪ್ಗಳು ಸಿಗುತ್ತವೆ.

ದ.ಕ ಜಿಲ್ಲೆಯ ವಾರ್ತಾಧಿಕಾರಿ ಖಾದರ್ ಷಾ ಮೇಳದ ಬಗ್ಗೆ ಹೇಳಿದ್ದೇನು?

ದ.ಕ ಜಿಲ್ಲೆಯ ವಾರ್ತಾಧಿಕಾರಿ ಖಾದರ್ ಷಾ ಮೇಳದ ಬಗ್ಗೆ ಹೇಳಿದ್ದೇನು?

ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಾವೇ ಸ್ವತ: ನಿರ್ಮಿಸಿದ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಜಿಲ್ಲೆಯ ಜನತೆ ಈ ವಿಶಿಷ್ಟ ಉತ್ಪಾನ್ನಗಳನ್ನು ಖರೀದಿಸುವ ಮೂಲಕ ಈ ಗ್ರಾಮೀಣ ಮೇಳವನ್ನು ಪ್ರೋತ್ಸಾಹಿಸ ಬೇಕು ಎಂದು ಖಾದರ್ ಷಾ ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಈ ರಾಜಸ್ಥಾನಿ ಗ್ರಾಮೀಣ ಮೇಳವು ಇಡೀ ರಾಜಸ್ತಾನಿ ಪರಂಪರೆಯನ್ನು ಬಿಂಬಿಸುತ್ತಲಿದ್ದು, ನಾವು ಕೆಲವು ದಿನಗಳ ಕಾಲ ರಾಜಸ್ತಾನಿಗಳಾಗಲು, ನಮ್ಮ ಮನೆ ರಾಜಸ್ತಾನಿ ಕಲಾತ್ಮಕತೆಯಿಂದ ಮೇಳೈಸುವ ಎಲ್ಲಾ ಅವಕಾಶಗಳು ಇಲ್ಲಿವೆ. ಒಮ್ಮೆ ಭೇಟಿ ಕೊಡಿ. ಹೆಚ್ಚಿನ ಮಾಹಿತಿಗಾಗಿ ದಿನೇಶ್ ಶರ್ಮ 91 9663282148 ಸಂಪರ್ಕಿಸಬಹುದು

English summary
The Rajasthana Grameen Mela an exclusive Exhibition cum sale of handloom,Handicraft, jewellery & Painting Exhibition.The Exhibition opened on 8th january,at hotel woodlands, Near Bunts hostel,Mangaluru, Karnataka. This inaugurated by Mr.Khader Sha, Publicity Officer,Dakshina Kannada. There are More Then 75 stalls showcasing the Block print Dress matirials, Suit, Top etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X