ಕದ್ರಿ ಶಿವನಿಗೆ ರಜತದ್ವಾರ ಅರ್ಪಿಸಿದ ಸಚಿವ ದೇಶಪಾಂಡೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 21: ಕದ್ರಿ ಶ್ರೀ ಮಂಜುನಾಥನ ರಥೋತ್ಸವದ ಅಂಗವಾಗಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ 16 ಕೆ.ಜಿ.ಯ 24 ಲಕ್ಷ ರೂ. ವೌಲ್ಯದ ಬೆಳ್ಳಿಯ ಮುಖ ಮಂಟಪ ದ್ವಾರವನ್ನು ಅರ್ಪಿಸಿದ್ದಾರೆ.

ಕದ್ರಿ ಶ್ರೀ ಮಂಜನಾಥ ದೇವರ ಜಾತ್ರಾ ಮಹೋತ್ಸವದ ಶುಭ ಅವರಸದಲ್ಲಿ ಕದ್ರಿ ದೇವಶಕ್ಕೆ ಸಚಿವರು ತಮ್ಮ ಸಹಕುಟುಂಬ ಸಮೇತರಾಗಿ ಆಗಮಿಸಿ ಬೆಳ್ಳಿ ಬಾಗಿಲನ್ನು ಅರ್ಪಿಸಿದರು. ಅಲ್ಲದೆ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದರು. ಈ ವೇಳೆ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉದ್ಯಮಿ ಎ.ಜೆ.ಶೆಟ್ಟಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಜೊತೆಗಿದ್ದರು.[ಹಾವೇರಿಯಲ್ಲಿ ಬರ, ಉದ್ಯೋಗ ಸೃಷ್ಟಿಗೆ ದೇಶಪಾಂಡೆ ಭರವಸೆ]

The minister RV Deshpande presented Silver Gate in kadri Sri Manjunatha temple

ಇನ್ನು ಈ ರಜತ ಮುಖ ಮಂಟಪದ ದ್ವಾರವನ್ನು ಸಾಂಪ್ರದಾಯಿಕವಾದ ಕುಸುರಿ ಕೆತ್ತನೆಯೊಂದಿಗೆ ಸ್ವರ್ಣ ಜ್ಯವೆಲರ್ಸ್ ನ ರಾಮದಾಸ ನ್ಯಾಕ್ ನೇತೃತ್ವದಲ್ಲಿ ತಯಾರಿಸಲಾಗಿದೆ.

The minister RV Deshpande presented Silver Gate in kadri Sri Manjunatha temple

ರಜತ ದ್ವಾರದಲ್ಲಿ ವೈದಿಕ ಶೈಲಿಯ ಅನೇಕ ಕೆತ್ತನೆಗಳನ್ನು ಮಾಡಲಾಗಿದ್ದು ಅದಲ್ಲಿ ಶಿವನಿಗೆ ಸಂಬಂಧಿಸಿದ ದ್ವಾರಪಾಲಕರನ್ನು ಕೆತ್ತಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The minister RV Deshpande presented rajatadvara in kadri Sri Manjunatha temple in Mangaluru. And paticipate Jatramahotsava in temple.
Please Wait while comments are loading...