ಹಸು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ, ಆರೋಪಿಗಳು ಪರಾರಿ

Posted By:
Subscribe to Oneindia Kannada

ಮಂಗಳೂರು, ಜೂನ್ 18: ಜರ್ಸಿ ತಳಿ ಹಸುವಿನ ಕಾಲುಗಳನ್ನು ಕಟ್ಟಿ ಕಾರಿನಲ್ಲಿ ಸಾಗಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರು ಆರೋಪಿಗಳು ಕಾರು ತೊರೆದು ಪರಾರಿಯಾಗಿದ್ದಾರೆ.

ಫರಂಗಿಪೇಟೆ ಕಡೆಯಿಂದ ಹಸುವನ್ನು ಸಾಗಿಸುತ್ತಿದ್ದ ವೇಳೆ ಅರ್ಕುಳದ ಚೆಕ್ ಪೋಸ್ಟ್ ಬಳಿ ಪೊಲೀಸರನ್ನು ಕಂಡು ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನ ಹಿಂಭಾಗದ ಸೀಟಿನ ಅಡಿಯಲ್ಲಿ ಜರ್ಸಿ ತಳಿಯ ಹಸುವಿನ ಕಾಲುಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

The Kankanady police seized a car that was transporting cow at Meramajal

ಈ ಕಾರು ಬಜ್ಪೆ ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಸ್ತಾಫ ಎಂಬುವರದ್ದು ಎಂದು ತಿಳಿದುಬಂದಿದೆ. ಸ್ವಾಧೀನಪಡಿಸಿಕೊಂಡ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪರಾರಿಯಾದ ಮೂವರು ಆರೋಪಿಗಳ ವಿರುದ್ಧ ಹಾಗೂ ಕಾರಿನ ಮಾಲೀಕ ಮೊಹಮ್ಮದ್ ಮುಸ್ತಾಫ ವಿರುದ್ಧ ಪ್ರಕರಣ ದಾಖಲಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Kankanady rural police cops have seized a car that was transporting cow at Meramajal, the culprits have escaped from the spot. It is said that the car belongs to Mohammad Mustaffa.
Please Wait while comments are loading...