ಸಂಜೆ ಬಿಡುವಿದ್ರೆ ಗ್ರೇಟ್ ಪ್ರಭಾತ್ ಸರ್ಕಸ್ ಗೆ ಹೋಗಿ ಬನ್ನಿ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಬಂಟ್ವಾಳ: ಡಿಸೆಂಬರ್ 2: ಇದು ಕರ್ನಾಟಕದ ಖ್ಯಾತಿಯ ಗ್ರೇಟ್ ಸರ್ಕಸ್ ಕಂಪನಿ, 78 ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕದ ಏಕೈಕ ಸರ್ಕಸ್ ಕಂಪನಿ ಗ್ರೇಟ್ ಪ್ರಭಾತ್ ಸರ್ಕಸ್ ಇಂದು ಮಂಗಳೂರಿನ ಬಿ.ಸಿ.ರೋಡಿನಲ್ಲಿ ಪ್ರದರ್ಶನ ಆರಂಭಿಸಲಿದೆ.

ಸಂಜೆ 7 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸುವರು.
ವಿಶೇಷ ಎನ್ನಾಪಎಂದ್ರೆ ಸರಕಾರದ ಯಾವುದೇ ಅನುದಾನ, ನೆರವೂ ಇಲ್ಲದೆ ಕಂಪೆನಿಯನ್ನು ಕೇವಲ ಕಲಾಪ್ರೀತಿಯಿಂದ ನಡೆಸುತ್ತಿರುವುದು.

prabhat

ಒಟ್ಟು 40 ದಿನ ಪ್ರದರ್ಶನಗಳು ನೆಡೆಯಲಿದ್ದು, .ಪ್ರತಿದಿನ 1, 4 ಮತ್ತು 7 ಗಂಟೆಗೆ ಪ್ರದರ್ಶನ ಇರಲಿದೆ. 150ಕ್ಕೂ ಅಧಿಕ ಕಲಾವಿದರು ಗ್ಲೋಬ್ ರೈಡಿಂಗ್, ಜಿಮ್ನಾಸ್ಟಿಕ್ಸ್, ಫ್ಲೈಯಿಂಗ್ ಟ್ರೋಪೀಸ್, ಮೋಟರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿ ರೋಪ್, ಸೈಕಲ್ ಬ್ಯಾಲನ್ಸ್,ಜೋಕರ್ಸ್ ಕಾಮಿಡಿ, ಪ್ರಾಣಿಗಳ ವಿವಿಧ ಕಸರತ್ತುಗಳು ಪ್ರದರ್ಶನಗೊಳ್ಳಲಿವೆ.

prabhat 2

ವಾರದ ನಂತರ ಶಾಲಾ ಮಕ್ಕಳಿಗೆ ಪ್ರದರ್ಶನದಲ್ಲಿ ರಿಯಾಯತಿ ನೀಡಲಾಗುವುದು ಕೂಡ. ಕುಟುಂಬದೊಂದಿಗೆ ಹೋಗಿ ಮತ್ತು ನಿಮ್ಮ ಮನಸ್ಸನ್ನು ಶಾಂತ ಮಾಡಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The greate prabhat circus is opening in Bantvala in Mangaluru. Are you free to go eveing see circus with take your children.
Please Wait while comments are loading...