ರಾಜ್ಯ ಕರಾವಳಿಯ ಮೀನು ರಫ್ತಿಗೆ ತಟ್ಟಿದ ಧೋಕ್ಲಾಂ ಬಿಕ್ಕಟ್ಟಿನ ಬಿಸಿ

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 19: ಭಾರತ ಚೀನಾ ಗಡಿಯ ಧೋಕ್ಲಾಂನಲ್ಲಿ ಉಂಟಾದ ಘರ್ಷಣೆಯ ಕಾವು ರಾಜ್ಯದ ಕರಾವಳಿಗೂ ತಟ್ಟಿದೆ. ಎರಡೂ ದೇಶಗಳ ನಡುವಿನ ಮುಸುಕಿನ ಗುದ್ದಾಟ ರಾಜ್ಯದ ಮೀನುಗಾರಿಕಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಕರಾವಳಿ ಜಿಲ್ಲೆಗಳಿಂದ ಚೀನಾಕ್ಕೆ ರಪ್ತಾಗುತ್ತಿದ್ದ ಮೀನಿನ ವಹಿವಾಟಿನಲ್ಲಿ ಶೇಕಡ 50 ರಷ್ಟು ಇಳಿಕೆ ಕಂಡಿದೆ.

ಕರಾವಳಿಯ ಉತ್ತರ ಕನ್ನಡ, ಉಡುಪಿ ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ವಿವಿಧ ಜಾತಿಯ ಮೀನುಗಳು ಅಮೆರಿಕಾ , ಜಪಾನ್, ಯುರೋಪ್ ರಾಷ್ಟ್ರಗಳು ಹಾಗೂ ಚೀನಾಕ್ಕೆ ರಫ್ತಾಗುತ್ತಿವೆ. ಕರಾವಳಿಯ ಮೀನುಗಳಿಗೆ ಈ ದೇಶಗಳಲ್ಲಿ ಭಾರಿ ಬೇಡಿಕೆ ಇದೆ.

ರಾಜ್ಯದ ಕರಾವಳಿಯಲ್ಲಿ ಸಿಗುವ ಬೊಂಡಾಸ್, ಕಪ್ಪೆ ಬೊಂಡಾಸ್, ಮಾಂಜಿ, ಪಾಂಪ್ಲೆಟ್, ರಿಬ್ಬನ್ ಫಿಶ್, ಸಿಗ಼ಡಿ, ಶೆಲ್ ಫಿಶ್ ಅಥವಾ ಮರುವಾಯಿ, ಬ್ಲಾಟ್ ಫಿಶ್ ಅಥವಾ ಬಾವಲಿ ಮೀನು ಸೇರಿದಂತೆ ಒಟ್ಟು 13 ಕ್ಕೂ ಹೆಚ್ಚು ಮೀನುಗಳಿಗೆ ಈ ದೇಶಗಳಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯಿದೆ.

ಧೋಕ್ಲಾಂ ಕರಿನೆರಳು

ಧೋಕ್ಲಾಂ ಕರಿನೆರಳು

ಧೋಕ್ಲಾಂ ಬಿಕ್ಕಟ್ಟಿನ ಕಾರಣಕ್ಕೆ ಇದೀಗ ಚೀನಾಗೆ ರಫ್ತಾಗುತ್ತಿದ್ದ ಮೀನುಗಳ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಭಾರತ ಹಾಗೂ ಚೀನಾ ನಡುವಿನ ಘರ್ಷಣೆ ಮಾತ್ರವಲ್ಲದೇ ಚೀನಾ ಹಾಗೂ ಅಮೆರಿಕಾ ನಡುವಿನ ಕೋಲ್ಡ್ ವಾರ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ಭಾರತದ ವಿರುದ್ಧ ಚೀನಾ ಪ್ರತೀಕಾರದ ಕ್ರಮ?

ಭಾರತದ ವಿರುದ್ಧ ಚೀನಾ ಪ್ರತೀಕಾರದ ಕ್ರಮ?

ಅಮೆರಿಕಾ ಮತ್ತು ಚೀನಾ ನಡುವಿನ ಶೀತಲ ಸಮರದಲ್ಲಿ ಚೀನಾ ಕರೆನ್ಸಿ 'ಯುವಾನ್' ಪ್ರಭಾವ ತಗ್ಗಿದೆ. ಜತೆಗೆ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ದೊಡ್ಡಮಟ್ಟದಲ್ಲಿ ದೇಶದಾದ್ಯಂತ ಅಭಿಯಾನ ಆರಂಭಗೊಳ್ಳುತ್ತಿದ್ದಂತೆ ಚೀನಾದ ಆರ್ಥಿಕತೆಗೆ ಒಂದಷ್ಟಾದರೂ ಹೊಡೆತ ಬಿದ್ದಿದೆ. ಇದಕ್ಕೆ ಪ್ರತಿಕಾರದ ಕ್ರಮವಾಗಿ ಭಾರತದಿಂದ ಆಮದಾಗುವ ಮೀನುಗಳಿಗೆ ಕಡಿಮೆ ದರ ನಿಗದಿ ಮಾಡಿರುವ ಚೀನಾದ ವರ್ತಕರು ಆಮದು ಪ್ರಮಾಣವನ್ನು ಇಳಿಸಿದ್ದಾರೆ ಎಂದು ಹೇಳಲಾಗಿದೆ.

ಶೇ. 50ರಷ್ಟು ರಫ್ತು ಇಳಿಕೆ

ಶೇ. 50ರಷ್ಟು ರಫ್ತು ಇಳಿಕೆ

ಹೀಗೆ ಚೀನಾ ರಫ್ತಾಗುತ್ತಿರುವ ಮೀನುಗಳ ಪ್ರಮಾಣ ಕಡಿಮೆಯಾಗಿದ್ದು "2 ವರ್ಷಗಳ ಹಿಂದ ಇದ್ದ ಮೀನಿನ ರಫ್ತುದರ ಈಗ ಶೇಕಡ 40 ರಷ್ಟು ಕಡಿತ ಮಾಡಲಾಗಿದೆ," ಎನ್ನುತ್ತಾರೆ ಬ್ಲೂ ವಾಟರ್ ಸಂಸ್ಥೆಯ ಶ್ರೀನಿವಾಸ್ ಭಟ್.ಹೀಗೆ ಚೀನಾ ರಫ್ತಾಗುತ್ತಿರುವ ಮೀನುಗಳ ಪ್ರಮಾಣ ಕಡಿಮೆಯಾಗಿದ್ದು "2 ವರ್ಷಗಳ ಹಿಂದ ಇದ್ದ ಮೀನಿನ ರಫ್ತುದರ ಈಗ ಶೇಕಡ 40 ರಷ್ಟು ಕಡಿತ ಮಾಡಲಾಗಿದೆ," ಎನ್ನುತ್ತಾರೆ ಬ್ಲೂ ವಾಟರ್ ಸಂಸ್ಥೆಯ ಶ್ರೀನಿವಾಸ್ ಭಟ್.

ಕೈ ಹಿಡಿದ ವಿದೇಶಿ ಮಾರುಕಟ್ಟೆ

ಕೈ ಹಿಡಿದ ವಿದೇಶಿ ಮಾರುಕಟ್ಟೆ

ಒಂದೆಡೆ ಚೀನಾಕ್ಕೆ ರಾಜ್ಯದ ಕರಾವಳಿಯ ಮೀನುಗಳ ರಫ್ತು ಕಡಿಮೆಯಾಗಿದ್ದರೂ ಇತರ ದೇಶಗಳಿಗೆ ಮೀನಿನ ರಫ್ತು ನಿರಾಂತಕವಾಗಿ ಸಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯ ಮೀನುಗಾರರು ಒಂದಷ್ಟು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The conflict between India and China has also affected the Dakshina Kannada fishing sector. Fish export to china from coastal districts has fallen by 50 percent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ