ದೇಗುಲದ ಕಾರ್ಯಕ್ರಮ ಪ್ರವೇಶ ನಿರ್ಬಂಧಿಸಿ ಮಂಗಳೂರಿನಲ್ಲಿ ಧರಣಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 31 : ದೇಗುಲದಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸೆಬಾಸ್ಟ್ರಿಯನ್ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.

ಶಾಸಕ ವಸಂತ್ ಬಂಗೇರ ನೇತೃತ್ವದಲ್ಲಿ ಸೌತಡ್ಕ ಮಹಾಗಣಪತಿ ದೇಗುಲದಲ್ಲಿ ಕಾರ್ಯಕ್ರಮವೊಂದನ್ನು ಮಂಗಳವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಸೆಬಾಸ್ಟಿಯನ್ ರನ್ನ ಆಹ್ವಾನಿಸಲಾಗಿತ್ತು. ಸೆಬಾಸ್ಟ್ರಿಯನ್ ಅವರನ್ನು ವೇದಿಕೆಗೆ ಕರೆಯುತ್ತಿದ್ದಂತೆ ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳದಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮ ರದ್ದು ಮಾಡುವಂತೆ ಆಗ್ರಹಿಸಿದರು.[ಮಹಿಳೆಯರಿಗೆ ನಿರ್ಬಂಧ ವಿಧಿಸಿರುವ ಭಾರತದ ದೇಗುಲಗಳು]

The BJP parivar protest against the local gram Panchayat President in kokkada

ವಿಷಯ ತಿಳಿದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನಡೆಯಬೇಕಿತ್ತು ಅವುಗಳಿಗೆ ಹಿನ್ನೆಡೆಯಾದಂತಾಯಿತು.

ಇನ್ನು ಅವರು ಕ್ರೈಸ್ತರು ದೇವಾಲಯದ ಪ್ರವೇಶ ಮಾಡುತ್ತಾರೆಂಬ ಕಾರಣಕ್ಕೆ ಈ ಘೋಷಣೆ ಕೂಗಿದರೋ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಪರಸ್ಪರ ವೈಷಮ್ಯವಿದೆಯೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP and the Sangh Parivar staged a protest against the local gram Panchayat President to stop him from taking part in the temple programme at Kokkada here on January 31.
Please Wait while comments are loading...