ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 8: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಬಳಿ ಟೋಲ್ ಸಂಗ್ರಹ ಆರಂಭಿಸುತ್ತಿದ್ದಂತೆ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದರ ವಿರುದ್ಧ ಜನ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ಬೆಳಿಗ್ಗೆಯಿಂದ ತಲಪಾಡಿಯಲ್ಲಿ ಟೊಲ್ ಸಂಗ್ರಹ ಆರಂಭಿಸಲಾಯಿತು. ಇದೇ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಗಡಿನಾಡು ರಕ್ಷಣಾ ವೇದಿಕೆ, ಖಾಸಗಿ ಬಸ್ ಮಾಲೀಕರು, ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ಟೋಲ್ ಸಂಗ್ರಹ ವಿರೋಧಿಸಿ ಟೋಲ್ ಬೂತ್ ಬಳಿ ಧರಣಿ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.[ಬಂಟ್ವಾಳ: ಮಾಜಿ ಗ್ರಾ.ಪಂ ಸದಸ್ಯನಿಗೆ ಭಜರಂಗದಳದಿಂದ ಬೆದರಿಕೆ]

Tension prevails at Talapady toll gate in Mangaluru

ರಾಷ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹೆದ್ದಾರಿ ಪ್ರಾಧಿಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಹೆದ್ದಾರಿಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರ ಮಧ್ಯೆ ಟೋಲ್ ಆರಂಭಿಸಲು ನಿರ್ಧರಿಸಿರುವುದು ಸರಿಯಲ್ಲ. ಮುಖ್ಯವಾಗಿ ಹೆಚ್ಚಿನ ಕಡೆ ಸರ್ವಿಸ್ ರಸ್ತೆಯೇ ಆಗಿಲ್ಲ. ಕಾಮಗಾರಿಯ ಅಪೂರ್ಣತೆಯಿಂದ ದಿನನಿತ್ಯ ತೊಕ್ಕೊಟ್ಟು, ಪಂಪ್‌ವೆಲ್, ನಂತೂರು, ಕೊಟ್ಟಾರ, ಪಣಂಬೂರು, ಸುರತ್ಕಲ್ ಇತ್ಯಾದಿ ಪ್ರಮುಖ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಟ್ರಂಪ್ ಚಹಾಕೂಟದಲ್ಲಿ ಮೂಡುಬಿದಿರೆ ಉದ್ಯಮಿ ರೊನಾಲ್ಡ್ ಕೊಲಾಸೋ]

Tension prevails at Talapady toll gate in Mangaluru

ಇದಲ್ಲದೆ ವಾಹನಗಳು ಟೋಲ್ ಎದುರುಗಡೆ ಬಂದು ನಿಂತಾಗ ಟೋಲ್ ಗೇಟನ್ನು ಮೇಲೆತ್ತಿ ವಾಹನಗಳು ಹಣ ನೀಡದೆ ತೆರಳುವಂತೆ ಪ್ರತಿಭಟನಾಕಾರರು ಅನುವು ಮಾಡಿಕೊಟ್ಟರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

Tension prevails at Talapady toll gate in Mangaluru

ಈ ಸಂದರ್ಭ ಗಡಿನಾಡು ರಕ್ಷಣಾ ವೇದಿಕೆಯ ವೈಭವ್ ಶೆಟ್ಟಿ, ಸಿದ್ದೀಕ್ ಕೊಳಂಗೆರೆ, ಗಣೇಶ್ ಶೆಟ್ಟಿ, ಹರ್ಷಾದ್ ವರ್ಕಾಡಿ ಸಿದ್ದೀಕ್ ತಲಪಾಡಿ ಸಹಿತ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಎಸಿಪಿ ಶೃತಿ, ಕೊಣಾಜೆ ಠಾಣಾಧಿಕಾರಿ ಅಶೋಕ್, ಉಳ್ಳಾಲ ಎಸ್.ಐ ರಾಜೇಂದ್ರ ಉಪಸ್ಥಿತರಿದ್ದು ಪರಿಸ್ಥಿತಿ ಹತೋಟಿಗೆ ತರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tension prevailed in Talapady area after toll collection began at the toll plaza here on Wednesday morning in National Highway 66, Mangaluru.
Please Wait while comments are loading...