ಮಂಜನಾಡಿಯಲ್ಲಿ 10 ವರ್ಷದ ವಿದ್ಯಾರ್ಥಿಗೆ ಚೂರಿ ಇರಿತ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 15 : ಮಂಜನಾಡಿ ಸಮೀಪದ ಕೈರಂಗಳ ಗ್ರಾಮದ ಜಲ್ಲಿಕ್ರಾಸ್ ಎಂಬಲ್ಲಿ ವಿದ್ಯಾರ್ಥಿ ರಾಝಿಕ್ (10) ಮದ್ರಸಾಕ್ಕೆ ಹೋಗುವ ವೇಳೆ ಚೂರಿಯಿಂದ ಇರಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮದ್ರಸಾಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಕೈಗೆ ಇರಿದು ಗಾಯಗೊಳಿಸಿದ್ದಾರೆ. ರಾಝಿಕ್‌ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. [ಮದ್ರಸಾ ಎಂದರೇನು? #banmadrasa ಏಕೆ?]

ಕಳೆದ ಮೂರ್ನಾಲ್ಕು ದಿನದಿಂದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬಿಗು ವಾತಾವರಣವಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. [ಟಿಪ್ಪು ಪರ ಘೋಷಣೆ ಕೂಗಿದವರು ಈಗ ವಿರೋಧಿಗಳಾ?]

Ten year old boy attacked in Manjanadi near Mangaluru

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆ.144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಆದರೂ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಈ ಭಾಗದಲ್ಲಿ ಆದಂತಹ ಚೂರಿ ಇರಿತ ಪ್ರಕರಣಗಳಲ್ಲಿ ಈವರೆಗೆ ಯಾವ ಕಿಡಿಕೇಡಿಯನ್ನೂ ಪೊಲೀಸರು ಬಂಧಿಸಲು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. [ಲಾಖ್ ವಿಷಯದಲ್ಲಿ ಯಾರು ಹಸ್ತಕ್ಷೇಪ ಮಾಡಬಾರದು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 10-year-old boy has been stabbed by miscreants in Manjanadi near Mangaluru on Monday night. He was returning from madrasa when he was stabbed. Such incidents are repeating even after imposing ban after communal clashes.
Please Wait while comments are loading...