ಮೊಬೈಲ್ ನೀಡಲಿಲ್ಲ ಎಂದು ನೇಣು ಹಾಕಿಕೊಂಡ ಯುವಕ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 25 : ಮೊಬೈಲ್ ನೀಡಿಲ್ಲ ಎಂದು ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಹೊರವಲಯದ ಪಿಲಾರ್ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಗೆ ಶರಣಾದ ವಿದ್ಯಾರ್ಥಿಯನ್ನು ಅರ್ಫಾಝ್(17) ಎಂದು ಗುರುತಿಸಲಾಗಿದೆ. ಮೊಬೈಲ್ ನಲ್ಲೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಅರ್ಫಾರ್ಝ್ ವರ್ತನೆಗೆ ತಂದೆ ಕೋಪ ಗೊಂಡು ತರಾಟೆಗೆ ತೆಗೆದು ಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಅರ್ಫಾರ್ಝ್ ನ ಮೊಬೈಲನ್ನು ತಂದೆ ತೆಗೆದಿಟ್ಟಿದ್ದರು. ಈ ಕಾರಣ ನಿನ್ನೆ ಸಂಜೆ ಮನೆಯಲ್ಲಿ ಯಾರು ಇಲ್ಲದಾಗ ಅರ್ಫಾರ್ಝ್ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Teen commits suicide because his refuses to give mobile

ಮೃತ ಅರ್ಫಾರ್ಝ್ ಮಂಗಳೂರು ಹೊರವಲಯದ ಚೆಂಬುಗುಡ್ಡೆಯ ಮಂಗಳೂರು ಒನ್ ಕಾಲೇಜಿನ ವಿದ್ಯಾರ್ಥಿ. ಮೊಬೈಲ್ ಇಲ್ಲದೇ ಮನ ನೊಂದಿದ್ದ ಅರ್ಫಾರ್ಝ್ ನಿನ್ನೆ ಬೆಳಿಗ್ಗೆ ಕಾಲೇಜಲ್ಲಿ ತಲೆ ಸುತ್ತಿ ಬಿದ್ದಿದ್ದ ಎಂದು ಹೇಳಲಾಗಿದೆ. ಈ ಕಾರಣ ಅವನಿಗೆ ತಂದೆ ಔಷದ ತಂದು ಕೊಟ್ಟಿದ್ದರು.

ಸಂಜೆ ಅರ್ಫಾರ್ಝ್ ತಂಗಿಗೆ ಔಷಧಿ ತರಲೆಂದು ಹೊರ ಹೋಗಿದ್ದ ಸಂಧರ್ಭ ಹೊಸ ಎಲೆಕ್ಟ್ರಿಕ್ ವಯರ್ ತಂದು ಫ್ಯಾನಿಗೆ ನೇಣು ಬಿಗಿದಿದ್ದಾನೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರಾದ್ದಕ್ಕೆಂದು ಬಂದ ಬಾಲಕ ಕೆರೆಯಲ್ಲಿ ಮುಳುಗಿ ಸಾವು
ಮಂಗಳೂರು, ನವೆಂಬರ್ 25 : ಅಜ್ಜನ ಶ್ರಾದ್ದಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ದಲ್ಲಿ ಬೆಳಕಿಗೆ ಬಂದಿದೆ. ಬಂಟ್ವಾಳದ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಈ ಘಟನೆ ನಡೆದಿದೆ. ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬುವರ ಪುತ್ರ ಶ್ರೀರಾಮ್(7) ಮೃತ ದುರ್ದೈವಿ ಬಾಲಕ.

ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ತನ್ನ ಸ್ನೇಹಿತನ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ ಬಿದ್ದಿದ್ದಾನೆ. ಇದೇ ವೇಳೆ ಸ್ನೇಹಿತ ಓಡಿ ಬಂದು ಶ್ರೀರಾಮ್ ಕೆರೆಗೆ ಬಿದ್ದಿರುವ ವಿಚಾರ ತಿಳಿಸಿದ್ದಾನೆ. ತಕ್ಷಣ ಅಲ್ಲಿದ್ದವರು ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸದರಾದರೂ ದಾರಿಮಧ್ಯೆ ಶ್ರೀರಾಮ್ ಮೃತಪಟ್ಟಿದ್ದಾನೆ.

ಶ್ರೀರಾಮ್ , ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Teen commits suicide because his refuses to give mobile. The deceased has been identified as Arfaz (17). It is said that his father had snatched the mobile due to heavy usage of mobile depressed by this it is said he committed suicide at his residence at pillar in Mangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ