ಮಂಗಳೂರು : ಟ್ಯಾಕ್ಸಿ ಚಾಲಕ ಕಾರಿನೊಂದಿಗೆ ನಾಪತ್ತೆ

By: ಮಂಗಳೂರು ಸುದ್ದಿ
Subscribe to Oneindia Kannada

ಮಂಗಳೂರು, ಜನವರಿ 20 : ಟ್ಯಾಕ್ಸಿ ಚಾಲಕನೊಬ್ಬ ಕಾರಿನ ಜೊತಗೆ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಕನಿಗಾಗಿ ಹುಡಕಾಟ ನಡೆದಿದೆ.

ನಾಪತ್ತೆಯಾದ ಚಾಲಕನನ್ನು ಆರ್.ಸಂತೋಷ್ ಎಂದು ಗುರುತಿಸಲಾಗಿದೆ. ಮೂಲ್ಕಿ ಕಾರ್ನಾಡುವಿನ ಅಂಬಿಕಾ ಟ್ರಾವೆಲ್ಸ್‌ನಲ್ಲಿ ಸಂತೋಷ್ ಕೆಲಸ ಮಾಡುತ್ತಿದ್ದರು. ಶನಿವಾರ ಕಾರಿನೊಂದಿಗೆ ಆತ ನಾಪತ್ತೆಯಾಗಿದ್ದು, ಟ್ರಾವೆಲ್ಸ್ ಮಾಲೀಕ ಮಧು ಆಚಾರ್ಯ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]

mangaluru

ಹಾಸನ ಜಿಲ್ಲೆಯ ಬೇಲೂರಿನ ಸಂತೋಷ್ ಹಲವು ದಿನಗಳಿಂದ ಅಂಬಿಕಾ ಟ್ರಾವೆಲ್ಸ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಟ್ರಾವೆಲ್ಸ್‌ ಮಾಲೀಕ ಮಧು ಆಚಾರ್ಯ ಅವರ ಬಳಿ ಸುಮಾರು 70 ಸಾವಿರ ಹಣ ತೆಗೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಶನಿವಾರ ಮೂಲ್ಕಿಯಿಂದ ಕುಂದಾಪುರದ ಕಡೆಗೆ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋದ ಸಂತೋಷ್, ನಂತರ ನಾಪತ್ತೆಯಾಗಿದ್ದಾನೆ. ಸಂತೋಷ್ ನಾಪತ್ತೆಯಾಗಲು ಹಣಕಾಸು ಮುಗ್ಗಟ್ಟು ಕಾರಣ ಎಂದು ಶಂಕಿಸಲಾಗಿದೆ. ಶುಕ್ರವಾರ ಮಂಗಳೂರಿನ ಫೈನಾನ್ಸ್ ಅಧಿಕಾರಿಗಳು ಸಂತೋಷ್ ವಾಸ್ತವ್ಯ ಹೂಡಿದ್ದ ರೂಂಗೆ ಬಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನಾಪತ್ತೆಯಾದ ಕಾರು ಮಣಿಪಾಲದ ಮಾಧವನಗರದ ವೈದ್ಯರೊಬ್ಬರ ಮನೆಯ ಆವರಣದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಾಲಕ ಸಂತೋಷ್‌ಗಾಗಿ ಹುಡುಕಾಟ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Mulki police continue to search for a taxi driver Santosh who went missing while on the job, on Saturday, January 16, 2016. Santosh working in Ambika Travels.
Please Wait while comments are loading...