ಸೊಗಡು ಶಿವಣ್ಣನ ಬೇಟೆಯಾಡಲು ಮತ್ತೆ ಬಿಲ್ಲು ರೆಡಿ ಮಾಡಿಕೊಂಡ ಬಿಎಸ್ ವೈ

Posted By:
Subscribe to Oneindia Kannada
   ಕರ್ನಾಟಕ ಚುನಾವಣೆ 2018 : ಬಿ ಎಸ್ ಯಡಿಯೂರಪ್ಪ ಹಾಗು ಸೊಗಡು ಶಿವಣ್ಣ ನಡುವೆ ಶೀತಲ ಸಮರ | Oneindia Kannada

   ಮಂಗಳೂರು, ನವೆಂಬರ್ 9 : ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಪಕ್ಷದಿಂದ ಹೊರ ಹಾಕಲು ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ,

   ಶಿವಣ್ಣ ಅವರು ಬಿಜೆಪಿ ರಥಯಾತ್ರೆ ಬಗ್ಗೆ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆಂದು ಹೈಕಮಾಂಡ್ ಬಳಿಗೆ ಕಂಪ್ಲೆಂಟ್ ಕೊಂಡೊಯ್ಯಲು ಯಡಿಯೂರಪ್ಪ ನಿಧಾರಿಸಿದ್ದಾರೆ.

   ಬಿಜೆಪಿ ಪರಿವರ್ತನಾ ಯಾತ್ರೆ, ಬಿಎಸ್‌ವೈ ಆಪ್ತರಾದ ನಾಯಕರು ಎಲ್ಲಿ?

   ಮಂಗಳೂರಿನಲ್ಲಿ ನವೆಂಬರ್ 9ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿರುವುದುರಿಂದ ಜಿಲ್ಲೆಗೆ ಆಗಮಿಸಿ ಪುತ್ತೂರಿನ ಮಹಾಲಿಂಗೇಶ್ವರ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಬಿಎಸ್ ವೈ, "ಬಿಜೆಪಿ ಯಾತ್ರೆಯ ಕುರಿತು ಪಕ್ಷ ವಿರೋಧಿ ಹೇಳಿಕೆ ನೀಡಿರುವ ಸೊಗಡು ಶಿವಣ್ಣ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಮನವಿ ಮಾಡಲಾಗುವುದು, ಈ ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಶಿವಣ್ಣನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದರು.

   ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

   ಮೊದಲಿನಿಂದಲೂ ಯಡಿಯೂರಪ್ಪ ಹಾಗೂ ಶಿವಣ್ಣ ಅವರ ಮಧ್ಯೆ ಜಂಗಿ ಕುಸ್ತಿ ನಡೆಯುತ್ತಲೇ ಇದೆ. ಬಿಎಸ್ ಯಡಿಯೂರಪ್ಪನವರ ಕೆಲವು ನಿರ್ಧಾರಗಳಿಗೆ ಅತೃಪ್ತಿ ವ್ಯಕ್ತಪಡಿಸಿರುವ ಮುಖಂಡರ ಗುಂಪಿನಲ್ಲಿ ಶಿವಣ್ಣ ಕೂಡ ಇದ್ದರು. ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು.

   ತುಮಕೂರಿನಿಂದ ಜ್ಯೋತಿ ಗಣೇಶ್ ಅಖಾಡಕ್ಕೆ, ಶಿವಣ್ಣಗಿಲ್ಲ ಬಿಜೆಪಿ ಟಿಕೆಟ್

   ಆ ನಂತರ ಬೆಂಗಳೂರಿನಲ್ಲಿ ಕೂಡ ಅತೃಪ್ತರ ಸಮಾವೇಶ ನಡೆದಿತ್ತು. ಅದರಲ್ಲೂ ಶಿವಣ್ಣ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಶಿವಣ್ಣ ಮತ್ತಿತರರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಬೇಕು ಎಂದು ದೆಹಲಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ತೀರ್ಮಾನ ಆಗಿತ್ತು.

   ಬಿಜೆಪಿ ಪರಿವರ್ತನಾ ಯಾತ್ರೆಯಿಂದ ದೂರ ಉಳಿದ ಶಿವಣ್ಣ

   ಬಿಜೆಪಿ ಪರಿವರ್ತನಾ ಯಾತ್ರೆಯಿಂದ ದೂರ ಉಳಿದ ಶಿವಣ್ಣ

   ಮುಂದಿನ ವಿಧಾನಸಭೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ರಾಜ್ಯದ್ಯಾಂತ ಪರಿವರ್ತನಾ ಯಾತ್ರೆಯಲ್ಲಿ ಹಮ್ಮಿಕೊಂಡಿದೆ. ಈ ಯಾತ್ರೆ ಮೊನ್ನೇ ತುಮಕೂರಿಗೆ ಹೋಗಿತ್ತು. ಇದರಲ್ಲಿ ಸಿಗಡು ಶಿವಣ್ಣ ಪಾಲ್ಗೊಂಡಿರಲಿಲ್ಲ. ಇದರಿಂದ ಯಡಿಯೂರಪ್ಪ ಅವರ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿತ್ತು.

   ಸೊಗಡು ಶಿವಣ್ಣಗೆ ಟಿಕೆಟ್ ಕಟ್ ಮಾಡಿದ ಬಿಎಸ್ ವೈ

   ಸೊಗಡು ಶಿವಣ್ಣಗೆ ಟಿಕೆಟ್ ಕಟ್ ಮಾಡಿದ ಬಿಎಸ್ ವೈ

   ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಜಯಗಳಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ 2018ರ ವಿಧಾನಸಭೆ ಟಿಕೆಟ್ ಕೈತಪ್ಪಲಿದೆ. ಶಿವಣ್ಣ ಬದಲಿಗೆ ತುಮಕೂರು ಬಿಜೆಪಿಯ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೆಸರನ್ನು ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇದರಿಂದ ಶಿವಣ್ಣಗೆ ಭಾರೀ ಹಿನ್ನಡೆಯಾಗಿದೆ.

   ಬಿಎಸ್ ವೈ ಹಾಗೂ ಶಿವಣ್ಣನ ನಡುವೆ ಶೀತಲ ಸಮರ

   ಬಿಎಸ್ ವೈ ಹಾಗೂ ಶಿವಣ್ಣನ ನಡುವೆ ಶೀತಲ ಸಮರ

   ಜಿಲ್ಲಾದ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕುರುಗಳ ಸಲಹೆ, ಅಭಿಪ್ರಾಯಗಳನ್ನು ಕೇಳದೆ ಯಡಿಯೂರಪ್ಪ ಅವರು ಸ್ವನಿರ್ಧಾರ ತೆಗೆದುಕೊಂಡಿದ್ದರಿಂದ ಕೆಲ ಬಿಜೆಪಿ ನಾಯಕರು ಮುನಿಸಿಕೊಂಡಿದ್ದರು. ಇದರಲ್ಲಿ ಶಿವಣ್ಣ ಕೂಡ ಇದ್ದರು. ಇದರಿಂದ ಬಿಎಸ್ ವೈ ಹಾಗೂ ಶಿವಣ್ಣನ ನಡುವೆ ಶೀತಲ ಸಮರ ನಡೆದಿತ್ತು.

   ಯಡ್ಡಿ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ್ದ ಶಿವಣ್ಣ

   ಯಡ್ಡಿ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ್ದ ಶಿವಣ್ಣ

   ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣಿ ಹಚ್ಚುವ ಯಡಿಯೂರಪ್ಪ ಅವರ ಧೋರಣೆಗಳನ್ನು ಖಂಡಿಸಿ ಕೆಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು, ಅಷ್ಟೇ ಅಲ್ಲದೇ ಈಶ್ವರಪ್ಪ ಅವರ ಪಾಳಯದಲ್ಲಿ ಗುರುತಿಸಿಕೊಂಡು ಯಡಿಯೂರಪ್ಪ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ್ದರಿಂದ್ದರು. ಅಂದಿನಿಂದ ಶಿವಣ್ಣ ಅವರು ಬಿಎಸ್ ವೈ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Take action against Sogadu Shivanna for anti-party statement about bjp parivartan yatra said BS Yeddyurappa in Puttur, Dakshina Kannada district on November 9th.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ