ಮಂಗಳೂರಲ್ಲಿ ಶಂಕಿತ ಐಎಸ್ ಐಎಸ್ ಉಗ್ರನ ಬಂಧನ, ಬಿಡುಗಡೆ

Posted By: Ramesh
Subscribe to Oneindia Kannada

ಮಂಗಳೂರು, ಡಿಸೆಂಬರ್. 25 : ಐಎಸ್ ಐಎಸ್ ಸೇರಲು ತೆರಳುತ್ತಿದ್ದ ಶಂಕಿತ ಉಗ್ರನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದ್ದು ಬಿಡುಗಡೆ ಗೊಳಿಸಲಾಗಿದೆ.

ಕೇರಳ ತಲಚೇರಿಯ ಮೂಲದ ಮುನಾಫ್ ರೆಹಮಾನ್ ನಲಕತ್ ಬಂಧಿತ ಆರೋಪಿ. ಐಸಿಸ್ ಸೇರಲು ಹೊರಟಿದ್ದ ಸಂದರ್ಭದಲ್ಲಿ ಮಂಗಳೂರು ಏರ್ ಪೋರ್ಟ್ ನಲ್ಲಿ ಎಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು.ತೀವ್ರ ವಿಚಾರಣೆ ಬಳಿಕ ಎನ್ ಐಎ ಅಧಿಕಾರಿಗಳು ಪಾಸ್ ಪೋರ್ಟ್ ನ್ನ ವಶಪಡಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ .

ವಿಮಾನ ನಿಲ್ದಾಣದಲ್ಲಿ ಅನುಮಾನಗೊಂಡ ಅಧಿಕಾರಿಗಳು ರೆಹಮಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ. ಬಂಧಿತ ಶಂಕಿತ ಉಗ್ರನನ್ನು ಎನ್ ಐಎ ವಶಕ್ಕೆ ನೀಡಲಾಗಿದ್ದು. ಹೆಚ್ಚಿನ ವಿಚಾರಣೆಗಾಗಿ ಮುನಾಫ್ ನನ್ನು ಎನ್ ಐಎ ಅಧಿಕಾರಿಗಳು ದೆಹಲಿಗೆ ಕೊಂಡೊಯ್ದಿದ್ದರು.

Suspected ISIS terrorist arrested in Mangaluru

ಘಟನೆ ವಿವರ:

ಐಸಿಸ್ ಗೆ ಸೇರಲು ಹೋಗುತ್ತಿದ್ದಾನೆ ಎಂಬ ಶಂಕೆಯ ಮೇರೆಗೆ ಕೇರಳದ ತಲಚೇರಿ ನಿವಾಸಿ ಮುನಾಫ್ ರೆಹ್ಮಾನ್ ನನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಮುಸ್ತಫಾ ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಪತ್ನಿ ಮನೆಯಿಂದ ಕುಟುಂಬ ಸಮೇತ ಉಗ್ರ ಸಂಘಟನೆಗೆ ಸೇರಲು ಹೋಗುವ ಸಂದರ್ಭದಲ್ಲಿ ಇಮಿಗ್ರೇಷನ್ ಪೊಲೀಸರು ಬಂಧಿಸಿದ್ದರು. ಶಂಕಿತ ಚಟುವಟಿಕೆ ಕಾರಣಕ್ಕೆ ಪೊಲೀಸರು ನಿಗಾ ಇಟ್ಟಿದ್ದರು. ಅಲ್ಲದೇ ಈತನಿಗೆ ಈ ಮೊದಲೇ ಎನ್ ಐ ಎ ಯಿಂದ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೆಚ್ಚಿನ ತನಿಖೆಗೆ ಇಮಿಗ್ರೇಷನ್ ಪೊಲೀಸರು ಎನ್‍ಐಗೆ ಹಸ್ತಾಂತರಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Suspected ISIS terrorist (Munaf Rahman nalakat) has been arrested in Mangaluru by mangalore international airport immigration officers on Sunday.
Please Wait while comments are loading...