ಮಂಗಳೂರಿನಲ್ಲಿ ಲವ್ ಜಿಹಾದ್ ಗುಮಾನಿ, ಯುವತಿಗೆ ಕೌನ್ಸೆಲಿಂಗ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 30: ಪ್ರೇಮ ಪ್ರಕರಣವೊಂದು ಲವ್ ಜಿಹಾದ್ ಎಂಬ ಗುಮಾನಿಯನ್ನು ಹುಟ್ಟಿಸಿದೆ. ಹಿಂದೂ ಯುವತಿಯೊಬ್ಬಳನ್ನು ಮುಸ್ಲಿಂ ಯುವಕ ಅಮೀರ್ ಸುಹೆಲ್ ಎಂಬಾತ ಪ್ರೀತಿಸುತ್ತಿದ್ದ. ಆತನೊಂದಿಗೆ ಬದುಕಲು ಇಚ್ಛಿಸುತ್ತಿದ್ದೇನೆ. ಇದನ್ನು ಪ್ರಶ್ನೆ ಮಾಡಲು ಹಿಂದೂ ಸಂಘಟನೆಯವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

24 ವರ್ಷದ ಗೃಹಿಣಿಗೆ 17ರ ಯುವಕನೊಂದಿಗೆ ಲವ್, ಓಡಿಹೋದವರ ಮೇಲೆ ಕೇಸ್

ಈ ಆಡಿಯೋದ ಜಾಡು ಹಿಡಿದು ಹಿಂದೂ ಸಂಘಟನೆಗಳು ಬೆನ್ನಟ್ಟಿವೆ. ಆಗ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಆ ಮುಸ್ಲಿಂ ಯುವಕ ಪತ್ತೆಯಾಗಿದ್ದಾನೆ. ಆತ ಗಾಂಜಾ ಮಾರುವವನಾಗಿದ್ದು, ವಿಧ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಸಂದರ್ಭದಲ್ಲಿ ರೆಡ್‌ ಹ್ಯಾಂಡ್ ಆಗಿ ಪೋಲಿಸರ ಕೈಗೆ ಸಿಕ್ಕಿ ಬಿದ್ದಿರುವುದು ಗೊತ್ತಾಗಿದೆ.

Suspect of Love jihad in Mangaluru, counseling for girl

ಆತನ ಹೆಸರು ಪೊಲೀಸರ ಬಳಿಯಿರುವ ಅಪರಾಧಿಗಳ ಪಟ್ಟಿಯಲ್ಲೂ ದಾಖಲಾಗಿದೆ. ಹೀಗಿದ್ದರೂ ಮಂಗಳೂರಿನ ಆ ಯುವತಿ ಮಾತ್ರ ಆತನ ಜೊತೆಗೆ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಈ ಮಧ್ಯೆ ಆ ಯುವತಿಯನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆ ಮತ್ತು ದುರ್ಗಾವಾಹಿನಿ ಕಾರ್ಯಕರ್ತೆಯರು ಕೌನ್ಸೆಲಿಂಗ್ ನಡೆಸಿ, ಆತನ ಜೊತೆ ತೆರಳದಂತೆ ತಡೆದಿದ್ದಾರೆ.

ಸದ್ಯಕ್ಕೆ ಯುವತಿಯ ಮನವೊಲಿಸಲು ಸಂಘಟನೆಗಳು ಯಶಸ್ವಿಯಾಗಿವೆ. ಇನ್ನು ಮುಂದೆ ಆತನ ಜೊತೆ ಹೋಗೋದಿಲ್ಲ ಅಂತ ಹೇಳಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amir Suhail , a drug peddler arrested by police in Mangaluru. He was in love with Hindu girl. Pro Hindu organisation now suspecting love jihad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ