ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಮಂಗಳೂರಿನ ಸಸಿಹಿತ್ಲು ಮುಂಡ ಬೀಚ್‌ ಸಿದ್ಧ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್. 27: 2017 ಮೇ 27ರಿಂದ 29ರವರೆಗೆ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಸಸಿಹಿತ್ಲು ಮುಂಡ ಬೀಚ್‌ ಸಿದ್ಧಗೊಂಡಿದೆ.

ಹಳೆಯಂಗಡಿ ಪಂಚಾಯಿತಿ ನೇತೃತ್ವದಲ್ಲಿ ಈ ವರ್ಷದ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಕ್ರೀಡಾಕೂಟ ನಡೆಯಲಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮಂತ್ರ ಸರ್ಫ್ ಕ್ಲಬ್ ತರಬೇತಿಯಡಿಯಲ್ಲಿ ಪಂಜಾಬ್, ಮಹಾರಾಷ್ಟ್ರ,ಬೆಂಗಳೂರು, ಹಾಗೂ ಹೊರ ದೇಶಗಳ ಕ್ರೀಡಾಪಟುಗಳಿಗೆ ಬೀಚ್ ನಲ್ಲಿ ತರಬೇತಿ ನೀಡಲಾಗುತ್ತಿದೆ.

ಕಡಲ್ಕೊರೆತದಿಂದ ನಾಶವಾಗುವ ಭೀತಿ: ಶಾ೦ಭಾವಿ ಮತ್ತು ನಂದಿನಿ ನದಿಯ ಒತ್ತಡ ಕಡಿಮೆಯಾದ ಕಾರಣ ಸಮುದ್ರ ಅಲೆಗಳ ಒಳ ಪ್ರವೇಶಿಸಿ ಮುಂಡ ಬೀಚ್ ಭೂಭಾಗವನ್ನು ತನ್ನ ಅಪೋಷನಕ್ಕೆ ತೆಗೆದುಕೊಳ್ಳುತ್ತಿದೆ.

Surfing festival to be held at mangaluru Sasihithlu Beach from May 27 to 29

ಇದರಿಂದ ಮುಂಡ ಬೀಚ್ ಪೂರ್ಣ ಭಾಗದಲ್ಲಿ ನಂದಿನಿ ನದಿ ಪಾತ್ರದಲ್ಲಿ ಕಡಲ್ಕೊರತೆ ತ್ರಿವಗೊಳ್ಳುತ್ತಿದೆ.

ಮುಂಡ ಪ್ರದೇಶ ಪಶ್ಚಿಮ ತೀರದಲ್ಲಿ ಕಡಲ್ಕೊರತೆ ತಪ್ಪಿಸಲು ಕಲ್ಲಿನ ಗೋಡೆ ನಿರ್ಮಿಸಲಾಗಿದೆ. ಇನ್ನೂಳಿದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಕಲ್ಲಿನ ಗೋಡೆ ಅಗತ್ಯವಿದೆ.

ಸಮುದ್ರ ಅಲೆಗಳ ನೇರವಾಗಿ ಒಳ ಪ್ರವೇಶಿಸುವ ಪರಿಣಾಮ ಮುಂಡ ಬೀಚ್ ಬಳಿ ಕಡಲ್ಕೊರತೆ ಉಂಟಾದರೆ, ಸಮದ್ರದಲ್ಲಿ ಸರ್ಫಿಂಗ್ ಕ್ರೀಡಾಪಟುಗಳಿಗೆ ಸೂಕ್ತವಾದ ಅಲೆಗಳ ಕೊರತೆ ಉಂಟಾಗುತ್ತದೆ.

ನಂದಿನಿ ನದಿಯ ಸೇತುವೆಯಡಿ ಅಗಾಧ ಪ್ರಮಾಣದಲ್ಲಿ ಮಣ್ಣು ಹಾಗು ಹೂಳು ಸೇರಿಕೊಂಡಿರುವ ಕಾರಣ ನದಿಯ ವೇಗಕ್ಕೆ ಹಿನ್ನಡೆಯಾಗಿದೆ. ನದಿ ಹಿಂದಿನ ಭಾಗದಲ್ಲಿ ವೇಗದಲ್ಲಿ ಹರಿಯುತ್ತಿದೆ.

ಈ ನದಿ ನಿಧಾನಗತಿಯನ್ನು ಪಡೆದುಕೊಂಡ ಕಾರಣ ಸಂಗಮ ಪಾತ್ರದಲ್ಲಿ ಮಣ್ಣು ತುಂಬಿಕೊಂಡು ಶಂಭವಿ ನದಿ ಮುಂಡ ಪ್ರದೇಶದ ಕಡೆ ತನ್ನ ಒತ್ತಡ ಹರಿಸುತ್ತದೆ.

ಇದರಿಂದ ಸಮುದ್ರ ಅಲೆಗಳಿಗೆ ತಡೆ ಇಲ್ಲದೆ ನೇರವಾಗಿ ಮುಂಡ ಬೀಚ್ ಗೆ ಅಪ್ಪಳಿಸುತ್ತಿದೆ ಎಂದು ಸ್ಥಳೀಯ ಅನುಭವಿ ಮೀನುಗಾರರು ತಿಳಿಸಿದ್ದಾರೆ.

English summary
Sasihithlu Beach near Surathkal is gearing up to host the All Cargo Indian Open of Surfing from May 27-29, this is the first surfing festival host in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X