ಪಣಂಬೂರು ಕಡಲ ತೀರದಲ್ಲಿ ಮಕ್ಕಳ ಮೈನವಿರೇಳಿಸುವಂತಹ ಪ್ರದರ್ಶನ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 09 : ಪಣಂಬೂರಿನಲ್ಲಿ ಸರ್ಫಿಂಗ್ ಕ್ಲಾಸ್ ಶುರುವಾಗಿದೆ. ಬಿಳಿನೊರೆಯ ಅಲೆಯಲ್ಲಿ ಪುಳಕದ ಮೋಜಿನಾಟ. ಹೌದು.. ಈಗ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ಆರ್ಭಟಿಸುವ ಕಡಲ ತೀರದಲ್ಲಿ ಸಾಹಸ ಪ್ರದರ್ಶಿಸುವ ಸರ್ಫಾರ್ ಗಳು ನೋಡೋಕೆ ಸಿಕ್ತಾರೆ.

ಸಮುದ್ರ ಸ್ನಾನದ ಮಜಾ, ಬೋಟಿಂಗ್, ಕುದುರೆ ಸವರಿ ಇಷ್ಟೆಲ್ಲ ನೋಡ ಸಿಗುತಿತ್ತು. ಆದರೆ, ಈಗ ಪಣಂಬೂರ್ ಬೀಚ್ ನಲ್ಲಿ ಆಳೆತ್ತರದ ಅಲೆಗಳ ಜತೆ ಮೈನವಿರೇಳಿಸುವಂತಹ ಮಕ್ಕಳು ಆಟವಾಡುವುದನ್ನು ಕಾಣಬಹುದು.

Surfing classes began at Panambur Beach by Surfing Federation of India

ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯ ಮುಲಕ್ಕಿಯ ಧ್ರುವ ಮಕ್ಕಳಿಗೆ ಸಮುದ್ರ ಅಲೆಗಳ ಜತೆ ಆಟವಾಡುವ ಈ ಸರ್ಫಿಂಗ್ ಕಲಿಸುತ್ತಿದ್ದಾರೆ. ಪ್ರಸ್ತುತ 30 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ಪಣಂಬೂರು, ಬೈಕಂಪಾಡಿ ಅನುವಾಸಿನ 7ರಿಂದ 14 ವರ್ಷದೊಳಗಿನ ಮಕ್ಕಳ ಸಮುದ್ರ ಅಲೆಗಳ ಜತೆ ಸಾಹಸ ಪ್ರದರ್ಶಿಸವ ಬಗ್ಗೆ ತರಬೇತಿ ಕೊಡಲಾಗುತ್ತದೆ.

Surfing classes began at Panambur Beach by Surfing Federation of India

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ತರಬೇತಿ: ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ 2 ತಾಸು ಅವಧಿಯಲ್ಲಿ ತರಬೇತಿ ನಡೆಯುತ್ತಿದೆ. ಇನ್ನು ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಪಣಂಬೂರು ಬೀಚ್ ಅಭಿವೃದಿ ಸಮತಿ ಸಿಇಓ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

ಪಣಂಬೂರು ಬೀಚ್ ಅಭಿವೃದಿ ಸಮತಿ ನೇತೃತ್ವದಲ್ಲಿ ದೇಶದ ಮೊದಲ ಸರ್ಫಿಂಗ್ ಕ್ಲಬ್ ಎಂಬ ಖ್ಯಾತಿಯ ಮುಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಪ್ರೇರಣೆಯಿಂದ ಪಣಂಬೂರು ಸರ್ಫಿಂಗ್ ಕ್ಲಬ್ ಪ್ರಾರಂಭಗೊಂಡಿದೆ.

Surfing classes began at Panambur Beach by Surfing Federation of India

ಹತ್ತಾರು ಬೀಚ್ ಗಳಿರುವ ಮಂಗಳೂರಿನಲ್ಲಿ ಸರ್ಫಿಂಗ್ ಜನಪ್ರಿಯಗೊಳುತ್ತಿರುವ ಹೊತ್ತಿಗೆ ಮಕ್ಕಳಲ್ಲಿ ಸರ್ಫಿಂಗ್ ಬಗ್ಗೆ ಕುತೂಹಲ ಮೂಡಿಸಿ, ಅವರನ್ನು ಭವಿಷ್ಯದಲ್ಲಿ ಸರ್ಫಿಂಗ್ ಸ್ಪರ್ಧೆಗೆ ತಯಾರಿ ಮಾಡುವ ಉದ್ದೇಶದಿಂದ ಈ ಪಣಂಬೂರು ಸರ್ಫಿಂಗ್ ಕ್ಲಬ್ ಹೊಟ್ಟಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Surfing classes began at Panambur Beach By Surfing Federation of India jointly with Mantra surf club.
Please Wait while comments are loading...