ಜ. 8ರಂದು ಸುರತ್ಕಲ್ ನಲ್ಲಿ 'ಕುಡ್ಲ ತುಳು ಮಿನದನ' ಕಾರ್ಯಕ್ರಮ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸುರತ್ಕಲ್ ಬಂಟರ ಸಂಘ ಮತ್ತು ಬಂಟರ ಸಂಘದ ಮಹಿಳಾ ವೇದಿಕೆಯ ಸಹಯೋಗದಲ್ಲಿ ಜನವರಿ 8ರಂದು 'ಕುಡ್ಲ ತುಳು ಮಿನದನ ಕಾರ್ಯಕ್ರಮ' ನಡೆಯಲಿದೆ.

ಸುರತ್ಕಲ್ ನ ಸುಭಾಷಿತ ನಗರದ ಬಂಟರ ಭವನದಲ್ಲಿ ಕಾರ್ಯಕ್ರಮ' ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಹೇಳಿದರು. ತುಳು ಮಿನದನ ಕಾರ್ಯಕ್ರಮದ ಪೂರ್ವಭಾವಿ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ತುಳುನಾಡಿನ ಸಂಸ್ಕೃತಿ, ಸಾಹಿತ್ಯ ವಿಚಾರಗಳ ಪರಿಚಯ ಮಾಡಿ ಕೊಡುವ ಕುಡ್ಲ ತುಳು ಮಿನದನ ಯಶಸ್ಸಿಗೆ ಶ್ರಮಿಸಿ ತುಳುನಾಡ ಸೇವೆ ಮಾಡಬೇಕಾಗಿದೆ ಎಂದು ಹೇಳಿದರು.

Surathkal Bantara Sangha to organise Kudla Tulu Minadana on January 8th at Surathkal

ಕಾರ್ಯಕ್ರಮವನ್ನು ಮಾಹೆ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಎ. ಮೊಯಿದಿನ್ ಬಾವಾ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಭಾಶಂಸನೆ ಮಾಡಲಿದ್ದಾರೆ.

ತುಳು ಭಾಷೆ ಉಳಿವಿಗೆ ಮಾಧ್ಯಮದ ಪಾತ್ರ ಮತ್ತು ಬದಲಾಗುತ್ತಿರುವ ತುಳುನಾಡಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮೊದಲಾದ ವಿಚಾರಗಳ ಬಗ್ಗೆ ಗೋಷ್ಠಿ ನಡೆಯಲಿದೆ.

ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಮಾಡುವುದರ ಮೂಲಕ ತುಳು ಸಂಸ್ಕೃತಿಯ ಅರಿವು ಸರ್ವರಿಗೂ ತಿಳಿದುಬರುವಂತೆ ಪ್ರಯತ್ನಿಸಬೇಕಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Tulu Sahitya Academy and Surathkal Bantara Sangha to organise Kudla Tulu Minadana programme on Jan 8th at Surathkal, said the president Ullas R Shetty.
Please Wait while comments are loading...