'ಮುಂದಿನ ತಿಂಗಳ ಒಳಗೆ ಸುರತ್ಕಲ್ ನಲ್ಲಿ ಆರ್ ಟಿಓ ಕಚೇರಿ ಆರಂಭ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ. 17 : ಒಂದು ತಿಂಗಳ ಒಳಗೆ ಸುರತ್ಕಲ್ ನಲ್ಲಿ ಆರ್ ಟಿಓ ಕಚೇರಿ ಆರಂಭವಾಗಲಿದೆ ಎಂದು ಮಂಗಳೂರು ಉತ್ತರ ವಿಧಾನ ಕ್ಷೇತ್ರದ ಶಾಸಕ ಮೋಯ್ದೀನ್ ಬಾವ ತಿಳಿಸಿದ್ದಾರೆ.

ಕಳೆದ ವರ್ಷ ಬಜೆಟ್ ನಲ್ಲಿ ರಾಜ್ಯದಲ್ಲಿ ಹೊಸ ಆರ್ ಟಿಓ ಕಚೇರಿ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ಅದರಂತೆ ಆರ್ ಟಿಓ ಕಚೇರಿ ಸಿಬ್ಬಂದಿ ಕೊರತೆಯಿಂದ ಆರಂಭವಾಗಿರಲಿಲ್ಲ.

ಆ ಪ್ರಕಾರ ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಸಾರಿಗೆ ಅಧಿಕಾರಿ ಕಚೇರಿ ಆರಂಭವಾಗಲಿದ್ದು ನೀಲ್ ಗಿರೀಸ್ ಬಳಿ ಕಚೇರಿಗೆ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.

Surathkal all set to get a new RTO office in next one month

ಜಂಟಿ ಆಯುಕ್ತರು ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದ್ದಾರೆ. ಅನುಮೋದನೆ ಪಡೆದ ಬಳಿಕ ಸಿಬ್ಬಂದಿ ನೇಮಕ ನಡೆಯಲಿದೆ ಎಂದರು.

ಸುರತ್ಕಲ್ ಆರ್ ಟಿಓಗೆ ಕೆಎ 62 ಎಂದು ವಾಹನ ನೋಂದಣಿ ಸಂಖ್ಯೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. ಹೊಸ ಕಚೇರಿ ಆಗುತ್ತಿರುವುದರಿಂದಾಗಿ ಮಂಗಳೂರು ಆರ್ ಟಿಓ ಕಚೇರಿ ಒತ್ತಡ ಕಡಿಮೆ ಆಗಲಿದೆ.

ಇದೀಗ ಸುರತ್ಕಲ್, ಮುಲ್ಕಿ, ಮೂಡಬಿದಿರೆಯಲ್ಲಿ ನಡೆಯುತ್ತಿದ್ದ ವಾಹನ ನೋಂದಣಿ, ಲೈಸೆನ್ಸ್ ನೀಡಿಕೆ ಕೆಲಸ ಇನ್ನು ಮುಂದೆ ಆರ್ ಟಿಓ ಕಚೇರಿಯಲ್ಲೇ ನಡೆಯಲಿದೆ ಎಂದರು.

ಮುಂಬರುವ ದಿನಗಳಲ್ಲಿ ಬಂಟ್ವಾಳದಲ್ಲಿ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ತೆರೆಯುವ ಪ್ರಸ್ತಾಪವಿದೆ ಎಂದು ಶಿವಮೊಗ್ಗ ಜಂಟಿ ಸಾರಿಗೆ ಆಯುಕ್ತ ಶಿವರಾಜ್ ಪಾಟೀಲ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four-years after regional transport offices (RTO)(KA 62)setting up at Surathkal in become one month says Mangaluru north mla Mohiuddin Bava.
Please Wait while comments are loading...