ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

Subscribe to Oneindia Kannada

ನವದೆಹಲಿ, ಫೆಬ್ರವರಿ 12: ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಮಧ್ಯಂತರ ತಡೆ ನೀಡಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ಇದರಿಂದ ಕಂಬಳಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದ ಸರಕಾರೇತರ ಸಂಸ್ಥೆಗೆ ಹಿನ್ನಡೆಯಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿದೆ. ಪ್ರಾಣಿಗಳ ಮೇಲಿನ ಹಿಂಸೆಯನ್ನು ಪರಿಗಣಿಸಿ, ಕಂಬಳ ಮತ್ತು ಎತ್ತಿನ ಗಾಡಿ ಓಟದ ಸ್ಪರ್ಧೆಗಳಿಗೆ ಮಾನ್ಯತೆ ನೀಡಿರುವ ಕರ್ನಾಟಕ ಸರಕಾರ ಕಾನೂನನ್ನು ವಿರೋಧಿಸಿ ಸರಕಾರೇತರ ಸಂಸ್ಥೆ ಫಿಯಾಪೋ (FIAPO) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆ

ಆದರೆ ಫಿಯಾಪೋ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.

Supreme Court refuses interim stay on 'Kambala' race in Karnataka

ಮಂಗಳೂರು: ವಿವಾದಾತ್ಮಕ ಕಂಬಳದಲ್ಲಿ ತಪ್ಪಿತು ಭಾರಿ ಅನಾಹುತ

ಪ್ರಾಣಿದಯಾ ಸಂಸ್ಥೆ ಪೇಟಾ ಕೂಡ ಪ್ರಾಣಿಗಳಿಗೆ ಹಿಂಸೆ ನೀಡುತ್ತಾರೆ ಎನ್ನುವ ಆರೋಪದ ಮೇಲೆ ಕಂಬಳ ನಿಷೇಧಕ್ಕೆ ಒತ್ತಾಯಿಸಿತ್ತು. ಮತ್ತು ಈ ಕುರಿತು ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday refused to grant interim stay on traditional buffalo races 'Kambala' held in Karnataka. The next date of hearing is March 14.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ