ಮಂಗಳೂರು : ಸುಲ್ತಾನ್ ಬತ್ತೇರಿಯಲ್ಲಿ ಚಿತ್ರೀಕರಣಕ್ಕೆ ದುಬಾರಿ ದರ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 18 : ಕರಾವಳಿಯ ಸುಲ್ತಾನ್ ಬತ್ತೇರಿ ಪ್ರವಾಸಿ ತಾಣ ಈಗ ಮತ್ತೆ ಸದ್ದು ಮಾಡುತ್ತಿದೆ. ಒಂದು ದಿನ ಬತ್ತೇರಿಯಲ್ಲಿ ಚಿತ್ರೀಕರಣ ಮಾಡಲು ನೀಡಬೇಕಾದ ಶುಲ್ಕವನ್ನು 50 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದು ಚಿತ್ರೀಕರಣಕ್ಕೆ ಬರುವವರ ಅಸಮಾಧಾನಕ್ಕೆ ಕಾರಣವಾಗಿದೆ.

ಎರಡು ತಿಂಗಳ ಹಿಂದೆ ಇದೆ ಬತ್ತೇರಿಯಲ್ಲಿ ಒಂದು ದಿನ ಚಿತ್ರೀಕರಣ ಮಾಡಲು 5 ಸಾವಿರ ರೂ. ನೀಡಬೇಕಿತ್ತು. ಈಗ ಈ ದರ 50 ಸಾವಿರಕ್ಕೆ ಏರಿಕೆಯಾಗಿದೆ. ಸುಲ್ತಾನ್ ಬತ್ತೇರಿ ಮಾತ್ರವಲ್ಲ ಪುರಾತತ್ವ ಇಲಾಖೆಯ ಅಧೀನದಲ್ಲಿ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿಯೂ ದರ ಹೆಚ್ಚಳವಾಗಿದೆ. [ಚಾರಣಿಗರ ಕೈಬೀಸಿ ಕರೆಯುವ ಕೊಡಗಿನ ಭತ್ತದರಾಶಿ ಬೆಟ್ಟ]

sultan battery

ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಸುವ ದರ ಪಟ್ಟಿಯನ್ನು ಸಿದ್ಧಪಡಿಸುವುದು ಕೇಂದ್ರ ಸರ್ಕಾರ. ಇದರಡಿ ಪುರಾತತ್ವ ಇಲಾಖೆ ಕೆಲಸ ನಿರ್ವಹಿಸುತ್ತದೆ. ದೇಶದ ಯಾವುದೇ ಮೂಲೆಯಲ್ಲಿರುವ ತಮ್ಮ ಇಲಾಖೆಗೆ ಸಂಬಂಧಪಟ್ಟ ಪ್ರವಾಸಿ ತಾಣಗಳನ್ನು ಚಿತ್ರೀಕರಣಕ್ಕೆ ಕೊಡುವ ಜವಾಬ್ದಾರಿ ಇಲಾಖೆಯದ್ದು. ಆದರೆ, ದರ ತುಂಬಾ ದುಬಾರಿ ಎಂಬುದು ಚಿತ್ರೋದ್ಯಮದದ ಆರೋಪ. [ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ]

ಸುಲ್ತಾನ್ ಬತ್ತೇರಿ ಒಂದು ಐತಿಹಾಸಿಕ ಪ್ರವಾಸಿ ತಾಣ. ಆದರೆ, ಅದರ ಸ್ಥಿತಿ ಕೂಡಾ ಅಷ್ಟು ಉತ್ತಮವಾಗಿಲ್ಲ. ರಾಷ್ಟ್ರೀಯ ಸ್ಮಾರಕದಂತೆ ಕಂಗೊಳಿಸುತ್ತಿದ್ದ ಸುಲ್ತಾನ್ ಬತ್ತೇರಿಯಲ್ಲಿ ಕಸ, ಮದ್ಯದ ಬಾಟಲಿಗಳು ತುಂಬಿ ತುಳುಕುತ್ತಿವೆ. [ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ]

ಕೋಟೆಗೆ ಕಟ್ಟಿದ ಕಲ್ಲುಗಳು ನಿಧಾನವಾಗಿ ಜಾರಿಕೊಂಡು ಯಾರದೋ ಮನೆಯ ಗೋಡೆಗೆ ಸೇರಿಕೊಳ್ಳುತ್ತಿರುವಾಗ ಪುರಾತತ್ವ ಇಲಾಖೆ ಏಕೆ ಮೌನಕ್ಕೆ ಶರಣಾಗಿದೆ? ಎನ್ನುವುದು ಕರಾವಳಿ ಭಾಗದ ಜನರ ಪ್ರಶ್ನೆ.

'ಕೇಂದ್ರ ಸರ್ಕಾರದ ಅಧೀನದಲ್ಲಿ ಪುರಾತತ್ವ ಇಲಾಖೆ ಕೆಲಸ ಮಾಡುತ್ತಿರುವುದರಿಂದ ಈ ದರ ನಿಗದಿ ಕೆಲಸವನ್ನು ಅವರೇ ನೋಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ಇದರಲ್ಲಿ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Archaeological department hiked the shooting charges up to 50, 000 at Sultan Battery watch tower Mangaluru. Sultan Battery constructed in 1784 by Tipu Sultan, it is the one of best location for shooting.
Please Wait while comments are loading...