ಸುಳ್ಯ: ಮಸೀದಿಯಿಂದ ಹೊರ ಬಂದ ಇಸ್ಮಾಯಿಲ್ ಬರ್ಬರ ಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಸುಳ್ಯ, ಸೆ. 23: ಸುಳ್ಯ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯೆ ವಹೀದಾ ಇಸ್ಮಾಯಿಲ್ ಅವರ ಗಂಡ ಇಸ್ಮಾಯಿಲ್ ನೇಲ್ಯಮಜಲುರವರನ್ನು ಶುಕ್ರವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇಸ್ಮಾಯಿಲ್ ರನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾದ ಘಟನೆ ಇಂದು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಹಾಡುಹಗಲೇ ನಡೆದಿದೆ.

Sullia : Vahida Ismail's husband Ismail Nelyamajalu Brutal Murder

ಇಸ್ಮಾಯಿಲ್ ಅವರು ಐವರ್ನಾಡು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತನ್ನ ಇನ್ನೋವಾ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Sullia : Vahida Ismail's husband Ismail Nelyamajalu Brutal Murder

ಕೆಲ ವರ್ಷದ ಹಿಂದೆ ಸುಳ್ಯ ಗಾಂಧಿನಗರದಲ್ಲಿ ಕೊಲೆ ಯತ್ನ ನಡೆದಿತ್ತಾದರೂ ಸ್ವಲ್ಪದರಲ್ಲೇ ಇಸ್ಮಾಯಿಲ್‌ರವರು ಪಾರಾಗಿದ್ದರು. ಬಳಿಕ ಇಸ್ಮಾಯಿಲ್‌ಯವರು ತನ್ನ ರಕ್ಷಣೆಗೆ ಅಂಗರಕ್ಷರನ್ನು ಹೊಂದಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ismail Nelyamajalu husband of Vahida Ismail a former member of taluk panchayat was brutally murdered at Aivarnadu, Sullia today(September 23).
Please Wait while comments are loading...